ಇಂದಿರಾ ಕ್ಯಾಂಟೀನ್ ಮರು ಆರಂಭಕ್ಕೆ ಸರ್ಕಾರ ಸೂಚಿಸಿದೆ.ಕೆಲವು ಕಡೆ ಕ್ಯಾಂಟೀನ್‌ನಲ್ಲಿ ಡಿಮಾಂಡ್ ಕಡಿಮೆ ಆಗಿತ್ತು.ಕೆಲವೆಡೆ ಉತ್ತೇಜನ ಕಡಿಮೆ ಆಗಿತ್ತು ಅಂತ ಕ್ಲೋಸ್ ಆಗಿತ್ತು.ಇರೋ ಕ್ಯಾಂಟೀನ್‌ಗಳ ಪೈಕಿ ೧೦ ಮೊಬೈಲ್ ಕ್ಯಾಂಟೀನ್ ಕ್ಲೋಸ್ ಆಗಿದೆ.೨೪೩ ಕಡೆಯೂ ಕ್ಯಾಂಟೀನ್ ಆರಂಭಿಸುತ್ತೇವೆ .ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ರಾಯ್‌ಪುರ ಹೇಳಿದ್ದಾರೆ
ಅಲ್ಲದೇ ಇಂದಿರಾ ಕಿಚನ್‌ಗಳ ಅಡುಗೆ ಮನೆಯಲ್ಲಿನ ಐಟಂಗಳನ್ನ ರೀಪ್ಲೇಸ್ ಮಾಡಬೇಕಿದೆ.೧ ತಿಂಗಳೊಳಗೆ ಆರಂಭಿಸೋ ಗುರಿ ಹೊಂದಿದ್ದೇವೆ.ಟೆಂಡರ್ ಆದ ನಂತರ ಯಾರಿಗೆ ಎಂದು ನಿರ್ಧಾರ ಆಗಲಿದೆ.ಮೊದಲು ತಿಂಡಿ ಕ್ವಾಂಟಿಟಿ ಕಡಿಮೆ ಇತ್ತು.ಈಗ ಅದನ್ನು ಹೆಚ್ಚು ಮಾಡಲು ನಿರ್ಧಾರ ಆಗಿದೆ.ತಿಂಡಿಯ ಬೆಲೆ ಕೂಡ ೫ ರಿಂದ ೧೦ ರೂಪಾಯಿಗೆ ಏರಿಕೆ ಮಾಡಲಾಗುತ್ತೆ.ರಾತ್ರಿ ಊಟಕ್ಕೆ ಬೇಡಿಕೆ ಕಡಿಮೆ ಇದ್ದು, ಅದು ಹಾಗೆಯೇ ಮುಂದುವರೆದಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ರಾಯ್‌ಪುರ ಹೇಳಿದ್ರು
ಇಂದಿರಾ ಕ್ಯಾಂಟೀನ್ ಅಕ್ರಮ ವಿಷಯವಾಗಿಯೂ ಪ್ರತಿಕ್ರಿಯಿಸಿದ್ದು,ಅಕ್ರಮ ಆಗಿರೋದಕ್ಕಿಂತ ಹಣ ಪಾವತಿಯಾಗಿಲ್ಲ ಅನ್ನೋ ದೂರು ಕೇಳಿಬಂದಿದೆ.ಮಾರ್ಷಲ್ಸ್ ನೀಡೋ ಆಧಾರದ ಮೇಲೆ ಮೊತ್ತ ಪಾವತಿ ಮಾಡಿದ್ದೇವೆ.೨ - ೩ ವರ್ಷಗಳಿಂದ ಯಾವುದೇ ತೊಂದರೆ ಇಲ್ಲ.೧೨೦ - ೧೩೦ ಕ್ಯಾಂಟೀನ್ ಸುಸ್ಥಿತಿಯಲ್ಲಿದೆ.೧ ತಿಂಗಳಲ್ಲಿ ಟೆಂಡರ್ ಆಗಲಿದೆ .ಗುತ್ತಿಗೆದಾರರಿಗೆ ಹಳೆ ಪೇಮೆಂಟ್ ಆಗಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ರಾಯ್‌ಪುರ ಹೇಳಿದ್ದಾರೆ