ವಿಧಾನ ಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗೆ ಭರ್ಜರಿ ಸ್ವಾಗತ..!

ಶನಿವಾರ, 14 ಜುಲೈ 2018 (11:08 IST)
ಅವರು ವಿಧಾನ ಸಭೆ ಚುನಾವಣೆ ಬಳಿಕ ಈ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲಿಯೇ ಇರಲಿಲ್ಲ. ಅಂತಹ ಪರಾಜಿತ ಅಭ್ಯರ್ಥಿ ಇಂದು ನಗರಕ್ಕೆ ಆಗಮಿಸಿದರು. ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಜೈಕಾರ ಕೂಗಿ ಅದ್ಧೂರಿಯಾಗಿ ಬರಮಾಡಿಕೊಂಡವರು. ಯಾರವರು? ಮುಂದೆ ಓದಿ…

 
ದರ್ಶನ್ ಪುಟ್ಟಣ್ಣಯ್ಯಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ವಿದೇಶದಿಂದ ವಾಪಸ್ಸಾದ ದರ್ಶನ್ ಪುಟ್ಟಣ್ಣಯ್ಯರಿಗೆ  
ರೈತಸಂಘದ ಕಾರ್ಯಕರ್ತರು, ಹಿತೈಷಿಗಳು ಅದ್ದೂರಿಯಾಗಿ ಸ್ವಾಗತ ಕೋರಿದರು. ಪಟಾಕಿ ಸಿಡಿಸಿ, ಸಿಹಿ ವಿತರಿಸಿ, ದರ್ಶನ್ ಗೆ ಜೈಕಾರ ಕೂಗಿದ ಕಾರ್ಯಕರ್ತರು ಬರಮಾಡಿಕೊಂಡರು.

ಶಾಸಕ ದಿ. ಪುಟ್ಟಣ್ಣಯ್ಯ ಪುತ್ರರಾಗಿರುವ ದರ್ಶನ ಪುಟ್ಟಣ್ಣಯ್ಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾಗಿದ್ದಾರೆ. ಚುನಾವಣೆಯಲ್ಲಿ ಸೋತ ನಂತರ ವಿದೇಶಕ್ಕೆ ಹಾರಿದ್ದರು. ವಿದೇಶದಲ್ಲಿ ತನ್ನ ಸಾಫ್ಟ್ವೇರ್ ಕಂಪನಿ ವ್ಯವಹಾರ ಮುಗಿಸಿ ಸ್ವಕ್ಷೇತ್ರಕ್ಕೆ ಆಗಮಿಸಿದ್ದಾರೆ. ಇನ್ಮುಂದೆ ತಂದೆ ಹಾದಿ ತುಳಿಯಲಿರುವ ದರ್ಶನ್.
ಶಾಶ್ವತವಾದ ರೈತಪರ ಹೋರಾಟಗಳಲ್ಲಿ ಭಾಗಿಯಾಗಲಿರುವ ದರ್ಶನ್ ಪುಟ್ಟಣ್ಣಯ್ಯ. ಮೈಸೂರಿನ ಸಾಫ್ಟ್ವೇರ್ ಉದ್ಯಮದ ಜೊತೆ ಜೊತೆಗೆ ರೈತರಪರವಾಗಿ ನಿಲ್ಲಲು ದರ್ಶನ್ ಚಿಂತನೆ ನಡೆಸಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ಆಗಮನದಿಂದ ರೈತಸಂಘದಲ್ಲಿ ಸಂಭ್ರಮ ಮನೆಮಾಡಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ