ಇಂಗ್ಲೆಂಡ್ ನಲ್ಲಿ ದಕ್ಕಿದ ಯಶಸ್ಸಿಗೆ ಕುಲದೀಪ್ ಯಾದವ್ ಗೆ ಸಿಗಲಿದೆ ದೊಡ್ಡ ಉಡುಗೊರೆ!

ಶನಿವಾರ, 14 ಜುಲೈ 2018 (10:10 IST)
ಟ್ರೆಂಟ್ ಬ್ರಿಡ್ಜ್: ಟಿ20 ಸರಣಿ ನಂತರ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ಕಮಾಲ್ ಮಾಡಿದ ಯುವ ಸ್ಪಿನ್ನರ್ ಕುಲದೀಪ್ ಯಾದವ್ ಗೆ ದೊಡ್ಡ ಉಡುಗೊರೆಯೇ ಸಿಗುವ ಸಾಧ್ಯತೆಯಿದೆ.


ಮೊದಲ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಕುಲದೀಪ್ ನಾನೀಗ ಟೆಸ್ಟ್ ಕ್ರಿಕೆಟ್ ಗೆ ಆಯ್ಕೆಯಾಗುವುದನ್ನು ಎದುರು ನೋಡುತ್ತಿದ್ದೇನೆ ಎಂದಿದ್ದರು. ಇದರ ಬಳಿಕ ಇದೀಗ ನಾಯಕ ವಿರಾಟ್ ಕೊಹ್ಲಿ ಕೂಡಾ ಇದೇ ಸುಳಿವು ನೀಡಿದ್ದಾರೆ.

ಕಿರು ಮಾದರಿಯಲ್ಲಿ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಸ್ಪಿನ್ ಜೋಡಿ ಮಾಡುತ್ತಿರುವ ಮೋಡಿ ನೋಡಿದರೆ ಟೆಸ್ಟ್ ತಂಡಕ್ಕೂ ಆಯ್ಕೆ ಮಾಡಬೇಕೆಂದು ಬಯಕೆಯಾಗುತ್ತಿದೆ ಎಂದು ನಾಯಕ ಕೊಹ್ಲಿ ಹೇಳಿಕೊಂಡಿದ್ದಾರೆ. ಹೀಗಾದರೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಕುಲದೀಪ್ ಆಯ್ಕೆಯಾದರೂ ಅಚ್ಚರಿಯಿಲ್ಲ.

ಒಂದು ವೇಳೆ ಕುಲದೀಪ್ –ಚಾಹಲ್ ಜೋಡಿ ಟೆಸ್ಟ್ ತಂಡಕ್ಕೆ ಆಯ್ಕೆಯಾದರೆ ಈಗಾಗಲೇ ಏಕದಿನ ಕ್ರಿಕೆಟ್ ನಲ್ಲಿ ಮೂಲೆಗುಂಪಾಗಿರುವ ಹಿರಿಯ ಸ್ಪಿನ್ ಜೋಡಿ ರವಿಚಂದ್ರನ್ ಅಶ್ವಿನ್-ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ ನಲ್ಲೂ ಸ್ಥಾನ ತೊರೆಯಬೇಕಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ