ಇಂದಿನಿಂದ ಹಾಪ್ ಕಾಮ್ಸ್ ಗಳಲ್ಲಿ ದ್ರಾಕ್ಷಿ,ಕಲ್ಲಂಗಡಿ ಮೇಳ...!
ಬುಧವಾರ, 22 ಫೆಬ್ರವರಿ 2023 (18:38 IST)
ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದ್ದು, ಬೇಸಿಗೆ ಕಳೆಯೋದೇ ಕಷ್ಟವಾಗಿ ಹೋಗಿದೆ. ಬೇಸಿಗೆಯಲ್ಲಿ ಅರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗುತ್ತೆ. ದೇಹಕ್ಕೆ ನೀರಿನಂಶ ಅಧಿಕವಾಗಿ ಬೇಕಾಗುತ್ತೆ. ಆರೋಗ್ಯವಾಗಿರಲು ದೇಹಕ್ಕೆ ಪೋಷಕಾಂಶಗಳ ಅಗತ್ಯತೆ ಇದೆ. ಬೇಸಿಯಲ್ಲಿ ಹಣ್ಣುಗಳನ್ನು ತಿನ್ನೋದ್ರಿಂದ ಬೇಸಿಗೆಯ ದಾಹ ಕಡಿಮೆ ಮಾಡಿಕೊಳ್ಳಬಹುದು ಅಲ್ಲಾ ಹಾಗಾಗಿ ಇಂದು ಕಾಮ್ಸ್ ಗಳಲ್ಲಿ ದ್ರಾಕ್ಷಿ,ಕಲ್ಲಂಗಡಿ ಮೇಳ ಶರುವಾಗಿದೆ .
ಬೆಂಗಳೂರಿನ ಹಾಪ್ ಕಾಮ್ಸ್ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಬೇಸಿಗೆ ಕಾಲ ಆರಂಭದಲ್ಲಿ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ ಆಯೋಜಿಸಲಾಗಿದ್ದು.ಇಂದು ಲಾಲ್ಬಾಗ್ ಬಳಿಯ ಎಂ.ಎಚ್.ಮರೀಗೌಡ ರಸ್ತೆಯಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮಾನ್ಯ ಶಾಸಕರಾದ ಉದಯ್ ಗರುಡಾಚಾರ್ ಹಾಗೂ ತೋಟಗಾರಿಕೆ ಸಚಿವ ಮುನಿರತ್ನ ಅವರು ಅದ್ದೂರಿ ಚಾಲನೆ ನೀಡಿದರು.
ದ್ರಾಕ್ಷಿ ಹಾಗೂ ಕಲ್ಲಂಗಡಿ ಬೆಳೆಗಾರರನ್ನು ಪ್ರೋತ್ಸಾಹಿಸುವ, ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಹಣ್ಣು ಒದಗಿಸಲು ಮೇಳ ಏರ್ಪಡಿಸಿಲಾಗುತ್ತಿದೆ. ಈ ಮೇಳದಲ್ಲಿ 10 ತಳಿಯ ದ್ರಾಕ್ಷಿ, ಐದು ಬಗೆಯ ಕಲ್ಲಂಗಡಿ ಜತೆಗೆ ಖರ್ಬೂಜ, ಕಿತ್ತಳೆ, ಚಕ್ಕೋತ, ಒಣದ್ರಾಕ್ಷಿ ಮತ್ತಿತರ ಡ್ರೈಫ್ರುಟ್ಸ್ಗಳು ಶೇ.10 ರಷ್ಟು ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಈ ಮೇಳದ ಅವಧಿಯಲ್ಲಿ ನಗರದಲ್ಲಿರುವ 200ಕ್ಕೂ ಅಧಿಕ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಗ್ರಾಹಕರು ಖರೀದಿಸಬಹುದು. ವಿಜಯಪುರ, ಬೆಳಗಾವಿ, ಬಾಗಲಕೋಟೆ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ದ್ರಾಕ್ಷಿ, ಕಲ್ಲಂಗಡಿ ಬೆಳೆಯಲಾಗಿದೆ. ಆ ಭಾಗಗಳ ರೈತರಿಗೆ ಮೇಳ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.
ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಲಾಲ್ ಬಾಗ್ ಸುತ್ತ ಮುತ್ತ ಪ್ರತಿಷ್ಠಿತ ಹಾಪ್ ಕಮ್ಸ್ ಮೇಳ ಓಪನ್ ಮಾಡಿದ್ದೀವಿ, ನಮ್ಮ ದೇಶದಲ್ಲಿ ಇಂತಹ ಒಂದು ದ್ರಾಕ್ಷಿ ಮೇಳ ಜೋರಾಗಿ ನಡೆಯುತ್ತೆ ಅಂತ ಖುಷಿಯಾಗಿದೆ. ಇಲ್ಲಿ ನಾನೆ ಫಸ್ಟ್ ಖರೀದಿ ಮಾಡಿದ್ದೇನೆ. ಈ ಮೇಳ ಚನ್ನಾಗಿ ನಡೀಲಿ ಮತ್ತು ನಮ್ಮ ಬೆಂಗಳೂರಿನ ಎಲ್ಲಾ ನಾಗರಿಕರು ಬಂದು ಈ ಮೇಳದಲ್ಲಿ ಭಾಗವಹಿಸಿ ಅಂತ ಶಾಸಕರಾದ ಉದಯ್ ಗರುಡಾಚಾರ್ ಮನವಿ ಮಾಡಿದ್ದಾರೆ.
ಪ್ರತಿವರ್ಷದಂತೆ ಈ ಬಾರಿಯೂ ಶೇ 10ರಷ್ಟು ರಿಯಾಯಿತಿ ದರದಲ್ಲಿ ದ್ರಾಕ್ಷಿ ಮತ್ತು ಕಲ್ಲಂಗಡಿ ಮಾರಾಟ ಮೇಳ ನಡೆಯುತ್ತಿದೆ. ರಾಜ್ಯದ ನಾನಾ ಭಾಗಗಳಿಂದ ಸುಮಾರು 15 ಜಾತಿಯ ದ್ರಾಕ್ಷಿ ಹಣ್ಣುಗಳು ಮತ್ತು 3 ರಿಂದ 4 ತಳಿಯ ಕಲ್ಲಂಗಡಿ ಹಣ್ಣುಗಳು ಮಾರುಕಟ್ಟುಹಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿವೆ. 500 ಟನ್ ದ್ರಾಕ್ಷಿ ಹಾಗೂ 1,000 ಟನ್ ಕಲ್ಲಂಗಡಿ ಮಾರಾಟ ಮಾಡುವ ಗುರಿ ಇದೆ ಎಂದು ಹಾಪ್ ಕಾಮ್ಸ್ ಅಧ್ಯಕ್ಷ ಎನ್. ದೇವರಾಜ್ ಹೇಳಿದರು.ಬೇಸಿಗೆಯಲ್ಲಿ ತಾಜಾ ಹಣ್ಣುಗಳಿಗೆ ಸ್ವಲ್ಪ ಡಿಮ್ಯಾಂಡ್ ಹೆಚ್ಚಾಗಿರುತ್ತದೆ. ಅದರಲ್ಲೂ ಬೇಸಿಗೆಯಲ್ಲಂತೂ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳೇ ಹೆಚ್ಚು ಹಾಗಾಗಿ ಹಾಪ್ ಕಾಮ್ಸ್ ಆಯೋಜಿಸಲಿರುವ ದ್ರಾಕ್ಷಿ ಮೇಳದಲ್ಲಿ ಜನ್ರು ಭಾಗಿಯಾಗಿ ಎಂಜಾಯ್ ಮಾಡೋದ್ರ ಜೊತೆಗೆ ಹಣ್ಣುಗಳ ಖರೀದಿಸಿ ಕೃಷಿ ಕ್ಷೆತ್ರಕ್ಕೆ ಇನ್ನಷ್ಟೂ ಬೆಂಬಲ ನೀಡಲಿರುವುದು ಅಂತೂ ನಿಜ.