ಭೂತ ಬಂಗಲೆ ಆದ ಕಲಾಸಿಪಾಳ್ಯ ಬಸ್ ಸ್ಟಾಂಡ್
ಕಲಾಸಿಪಾಳ್ಯ ಬಸ್ ಸ್ಟಾಂಡ್ ಗೆ ಆರು ವರ್ಷವಾದ್ರೂ ಉದ್ಘಾಟನೆ ಭಾಗ್ಯ ಸಿಗ್ತಿಲ್ಲ.ಪ್ರಮುಖ ನಗರಗಳಿಗೆ ತೆರಳಲು ಖಾಸಗಿ ಬಸ್ಗಳ ಪ್ರದೇಶವಾಗಿರುವ ಕಲಾಪಿಪಾಳ್ಯ ಬಸ್ ಟರ್ಮಿನಲ್ ಸಿದ್ಧಗೊಂಡು ವರ್ಷಗಳೇ ಕಳೆದರೂ ಉದ್ಘಾಟನೆ ಭಾಗ್ಯವೇ ಇಲ್ಲ.ಆರು ವರ್ಷಗಳ ಹಿಂದೆ ಕಲಾಸಿಪಾಳ್ಯ ಬಸ್ ನಿಲ್ದಾಣ ನಿರ್ಮಾಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ರವರಿಂದ ಶಂಕು ಸ್ಥಾಪನೆಯಾಗಿದೆ.4.13 ಎಕರೆ ವಿಸ್ತೀರ್ಣದ 60 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣ ನಿರ್ಮಾಣ ಪೂರ್ಣವಾಗಿದೆ. 2018ರ ಡಿಸೆಂಬರ್ನಲ್ಲಿಯೇ ಪೂರ್ಣಗೊಳ್ಳಬೇಕಿತ್ತು.ತಡವಾಗಿ ಕೊನೆಗೂ 4 ವರ್ಷದ ಬಳಿಕ ಸಿದ್ಧವಾಗಿದೆ.ಕೆಎಸ್ಆರ್ಟಿಸಿ, ಬಿಎಂಟಿಸಿ, ಅಂತಾರಾಜ್ಯ ಸರ್ಕಾರಿ ಹಾಗೂ ಖಾಸಗಿ ಬಸ್ಗಳು ಪಕ್ಕದ ರಸ್ತೆಯಲ್ಲೇ ನಿಲುಗಡೆ ಮಾಡುತ್ತಿವೆ.ಈ ನೂತನ ಬಸ್ ನಿಲ್ದಾಣ ಇದೀಗ ಹಾಳು ಕೊಂಪೆಯಾಗಿದೆ.ಸಿದ್ದವಾಗಿ ನಿಗಿನಿಗಿ ಎನ್ನಬೇಕಿದ್ದ ನಿಲ್ದಾಣದಲ್ಲಿ ರಾತ್ರಿ ಕಳೆದರೆ ಬಿಕೋ ಎನ್ನುತ್ತಿರುತ್ತೆ.ಯಾರು ಕೂಡ ಈ ನಿಲ್ದಾಣವನ್ನ ನಿರ್ವಹಣೆ ಮಾಡುತ್ತಿಲ್ಲ.ಉದ್ಘಾಟನೆ ಆದ ಬಳಿಕ ನಿರ್ವಹಣೆ ಮಾಡಿದರೆ ಆಯ್ತು ಅಂತ ಭೂತ ಬಂಗಲೆ ರೀತಿ ಬಿಟ್ಟಿದ್ದಾರೆ.ಈ ನಿಲ್ದಾಣ ಆದಷ್ಟು ಬೇಗ ಉದ್ಘಾಟನೆ ಆದರೆ ಒಳಿತು ಎಂದು ಸ್ಥಳೀಯರ ವಾದವಾಗಿದೆ