ಮಹಾರಾಷ್ಟ್ರದಲ್ಲಿ ಭಾರೀ ಭೂಕಂಪ; ರಾಜ್ಯಕ್ಕೆ ಅಪಾಯ ಭೀತಿ

ಶುಕ್ರವಾರ, 2 ಆಗಸ್ಟ್ 2019 (14:24 IST)
ಮಹಾರಾಷ್ಟ್ರದ ಕೊಯ್ನಾ ಡ್ಯಾಂ ಬಳಿ ಭೂ ಕಂಪನ ಸಂಭವಿಸಿದ್ದು, ರಾಜ್ಯದ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರೋ ಸಾಧ್ಯತೆ ಕಂಡುಬರುತ್ತಿದೆ.

3.4 ರಷ್ಟು ರಿಕ್ಟರ್ ಮಾಪನದಲ್ಲಿ ಭೂ ಕಂಪನ ತೀವ್ರತೆ ದಾಖಲಾಗಿದೆ. 105 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ ಡ್ಯಾಂ ಇದಾಗಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿರುವ ಕೊಯ್ನಾ ಡ್ಯಾಂ ನಲ್ಲಿ ಭೂ ಕಂಪನ ಸಂಭವಿಸಿರೋದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕೊಯ್ನಾ ಡ್ಯಾಂ ಗೆ ಧಕ್ಕೆಯಾದರೆ ಕರ್ನಾಟಕ ರಾಜ್ಯಕ್ಕೆ ಅಪಾಯವಾಗೋದ್ರಲ್ಲಿ ಸಂದೇಹವಿಲ್ಲ ಎನ್ನಲಾಗಿದೆ.
ಏಕಾಏಕಿ ಹೆಚ್ಚುವರಿ ನೀರು ಹರಿದು ಬಂದ್ರೆ ರಾಜ್ಯದಲ್ಲಿ ಪ್ರವಾಹ ಭೀತಿ ತಲೆದೋರೋದು ನಿಶ್ಚಿತ. ಕೃಷ್ಣಾ ನದಿ ತೀರದ ಹಲವು ಗ್ರಾಮ, ಪಟ್ಟಣಗಳಲ್ಲಿ ಪ್ರವಾಹ ಭೀತಿ ಈಗಾಗಲೇ ಎದುರಾಗಿದೆ. ಕೊಯ್ನಾ ಡ್ಯಾಂ ನ ಸುತ್ತ 20 ಕಿ.ಮೀ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದೆ.

ಭೂಕಂಪನ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ನೀರು ಬಿಡುಗಡೆ ಸಾಧ್ಯತೆಯಿದೆ. ಕೃಷ್ಣಾ ನದಿಗೆ ಇನ್ನೂ ಹೆಚ್ಚು ನೀರು ಹರಿಸುವ ಸಾಧ್ಯತೆ ಕಂಡು ಬಂದಿದ್ದು, ರಾಜ್ಯದ ಗಡಿ ಪ್ರದೇಶಗಳಲ್ಲಿ ಪ್ರವಾಹ ಭೀತಿ ತಲೆದೋರಲಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ