ಬಾಳಸಂಗಾತಿ ಹುಡುಕಾಟಕ್ಕೆ ಸರದಿಸಾಲಿನಲ್ಲಿ ಕ್ಯೂ ನಿಂತ ವರರು

ಸೋಮವಾರ, 14 ನವೆಂಬರ್ 2022 (15:16 IST)
ರಾಜ್ಯ ಮಟ್ಟದ ಒಕ್ಕಲಿಗ ವಧು-ವರರ ಸಮಾವೇಶ ಮಂಡ್ಯದಲ್ಲಿ ನಡೆಯುತ್ತಿದೆ.ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ನಿನ್ನೆ ಸಮಾವೇಶ ಆಯೋಜನೆ ಮಾಡಲಾಗಿದ್ದು,ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಶ್ರೀ ಕ್ಷೇತ್ರದಲ್ಲಿ ಜನಸಾಗರ ಕಿಕ್ಕಿರಿದು ಸೇರಿದೆ.ಮದುವೆ ಗಂಡು-ಹೆಣ್ಣು ಹುಡುಕಾಟಕ್ಕೆ ಜನರು ಹರಿದು ಬರುತ್ತಿದ್ದಾರೆ.ಹತ್ತು‌ ಸಾವಿರಕ್ಕೂ ಅಧಿಕವರರು ನೊಂದಣಿ ಮಾಡಿಕೊಂಡಿದ್ದು,ವಧು ನೋಂದಣಿ ಸಂಖ್ಯೆ ಕೇವಲ 250 .ಬಾಳ ಸಂಗಾತಿ ಹುಡುಕಾಟಕ್ಕೆ ಸರತಿ ಸಾಲಿನಲ್ಲಿ  ವಧುವರರು ನಿಂತಿದ್ದಾರೆ.ಕೇವಲ 250 ವಧುಗಳು ನೊಂದಣಿ ಮಾಡಿಕೊಂಡಿದ್ದಾರೆ . ಹೀಗಾಗಿ ನೊಂದಣಿ ಮಾಡಿಕೊಂಡಿದ್ದ ವರರು ಬಾರೀ ನಿರಾಸೆಗೆ ಒಳಗಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ