ಶಿಕ್ಷಕಿ ಬೈದಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ

ಸೋಮವಾರ, 14 ನವೆಂಬರ್ 2022 (15:02 IST)
ಶಾಲಾ ಶಿಕ್ಷಕಿ ಬೈದಿದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ  ಬಾಣಸವಾಡಿಯ ಪಿಳ್ಳಾರೆಡ್ಡಿ ನಗರದಲ್ಲಿ  ನಡೆದಿದೆ.ಅಮೃತಾ ನೇಣಿಗೆ ಶರಣಾದ ವಿದ್ಯಾರ್ಥಿನಿಯಾಗಿದ್ದು,ಬಾಣಸವಾಡಿಯ ಮರಿಯಮ್ ಸ್ಕೂಲ್ ನಲ್ಲಿ ಬಾಲಕಿ 10 ನೇ ತರಗತಿ ಓದುತ್ತಿದ್ದಳು.ಎಲ್ಲಾ ವಿದ್ಯಾರ್ಥಿಯ ಮುಂದೆ ಬೈದಿದಕ್ಕೆ  ಬಾಲಕಿ ಮನನೊಂದು ನಿನ್ನೆ ಸಂಜೆ 5.15 ಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಇನ್ನೂ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಡೆತ್ ನೋಟ್ ನಲ್ಲಿ Mom am sorry am not able to forget in school I cannot live with this guilty .ಎಂದು ವಿದ್ಯಾರ್ಥಿ ಬರೆದಿಟ್ಟು ಕೊನೆಯಲ್ಲಿ I love u mom, daddy ಎಂದು ಅಮೃತಾ ಪತ್ರ ಬರೆದ್ದು ಮೆಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ