ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿರುವವರಿಗೆ ಮತ್ತೆ ನಿರಾಸೆ

Krishnaveni K

ಬುಧವಾರ, 5 ಫೆಬ್ರವರಿ 2025 (14:18 IST)
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಹಣ ಕಳೆದ ಮೂರು ತಿಂಗಳಿನಿಂದ ಬಾಕಿಯಿದ್ದು ಹಣಕ್ಕಾಗಿ ಕಾಯುತ್ತಿರುವ ಫಲಾನುಭವಿಗಳಿಗೆ ನಿರಾಸೆ ಕಾದಿದೆ.

ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿಯ ಖಾತೆಗೆ ಪ್ರತೀ ತಿಂಗಳು 2,000 ರೂ. ಕ್ರೆಡಿಟ್ ಆಗಬೇಕು. ಆದರೆ ಕಳೆದ ಮೂರು ತಿಂಗಳಿನಿಂದ ಸರಿಯಾಗಿ ಹಣ ಕ್ರೆಡಿಟ್ ಆಗಿಲ್ಲ.  ಈ ಕಾರಣಕ್ಕೆ ಫಲಾನುಭವಿಗಳು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಗೃಹಲಕ್ಷ್ಮಿ ಹಣದ ಬಗ್ಗೆ ಕೇಳಿದರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತೀ ಬಾರಿಯೂ ಒಂದಿಲ್ಲೊಂದು ಸಮಜಾಯಿಷಿ ಕೊಡುತ್ತಲೇ ಇರುತ್ತಾರೆ. ಸರ್ವರ್ ಸಮಸ್ಯೆ, ತಾಂತ್ರಿಕ ಸಮಸ್ಯೆ ಎನ್ನುತ್ತಾರೆ. ಇಲ್ಲವೇ ಈ ತಿಂಗಳಿನ ಹಣ ಮುಂದಿನ ತಿಂಗಳು ಹಾಕುತ್ತೇವೆ ಎನ್ನುತ್ತಾರೆ.

ಆದರೆ ಕಳೆದ ತಿಂಗಳು ಮಾತ್ರವಲ್ಲ, ಮೂರು ತಿಂಗಳಿನಿಂದ ಸರಿಯಾಗಿ ಹಣ ಬಂದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂಥಾ ಚಂದಕ್ಕೆ ಯೋಜನೆ ಯಾಕೆ ಘೋಷಿಸಬೇಕಿತ್ತು ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಸದ್ಯಕ್ಕೆ ಫಲಾನುಭವಿಗಳ ಪಟ್ಟಿ ನವೀಕರಿಸಲಾಗುತ್ತಿದೆ. ಇದೇ ಕಾರಣಕ್ಕೆ ಲೇಟ್ ಆಗಿದೆ ಎಂಬ ಉತ್ತರ ಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ