ಮೈಕ್ರೋ ಫೈನಾನ್ಸ್ ಗೆ ವಿಧಿಸಿರುವ ಹೊಸ ನಿಯಮಗಳು ಏನು, ಎಷ್ಟು ಶಿಕ್ಷೆ ಇಲ್ಲಿದೆ ವಿವರ

Krishnaveni K

ಮಂಗಳವಾರ, 4 ಫೆಬ್ರವರಿ 2025 (08:56 IST)
ಬೆಂಗಳೂರು: ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದ್ದು ರಾಜ್ಯಪಾಲರ ಅಂಕಿತದ ಬಳಿಕ ಇಂದಿನಿಂದಲೇ ಜಾರಿಯಾಗುವ ಸಾಧ್ಯತೆಯಿದೆ. ಮೈಕ್ರೋಫೈನಾನ್ಸ್ ಗೆ ವಿಧಿಸಿರುವ ನಿಯಮಗಳು ಏನು ಇಲ್ಲಿದೆ ವಿವರ.

ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಹಾವಳಿಯಿಂದ ಸಾಲ ಪಡೆದವರು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಸರ್ಕಾರ ಇಂತಹ ಸಂಸ್ಥೆಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ತೀರ್ಮಾನಿಸಿದೆ.

ಮೈಕ್ರೋಫೈನಾನ್ಸ್ ವಿರುದ್ಧ ಸರ್ಕಾರ ಕಠಿಣ ನಿಯಮಗಳನ್ನು ರೂಪಿಸಿದ್ದು ಸುಗ್ರೀವಾಜ್ಞೆ ರೂಪಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗಿತ್ತು. ರಾಜ್ಯಪಾಲರ ಅಂಕಿತ ಬಿದ್ದ ಕೂಡಲೇ ಸುಗ್ರೀವಾಜ್ಞೆ ಜಾರಿಗೆ ಬರಲಿದೆ.

ಸುಗ್ರೀವಾಜ್ಞೆಯಲ್ಲಿ ಏನಿದೆ?
ಇನ್ನು ಮುಂದೆ ಹಣ ವಾಪಸ್ ಮಾಡುವಂತೆ ಕಿರುಕುಳ ನೀಡಿದ್ರೆ 10 ವರ್ಷ ಜೈಲು ಮತ್ತು 5 ಲಕ್ಷ ರೂ. ದಂಡ ವಿಧಿಸಬಹುದಾಗಿದೆ.
ಸಾಲ ಕೊಟ್ಟಿದ್ದಕ್ಕೆ 30 ದಿನದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು.
ನೋಂದಣಿ ಮಾಡಿಸಿಕೊಳ್ಳದೇ ಸಾಲ ಕೊಟ್ಟರೆ ಅದು ಮನ್ನಾ ಆಗಲಿದೆ.
ನೊಂದಾಯಿತ ಹಣಕಾಸು ಸಂಸ್ಥೆ ವಿರುದ್ಧ ಆರೋಪ ಸಾಬೀತಾದರೆ ಆ ಸಂಸ್ಥೆಯ ಪರವಾನಗಿಯೇ ರದ್ದಾಗಲಿದೆ.
ಕಿರುಕುಳ ಕೊಟ್ಟದಲ್ಲಿ ಸಾಲ ಪಡೆದವರು ಪೊಲೀಸರಿಗೆ ದೂರು ನೀಡಬಹುದಾಗಿದೆ
ಡಿವೈಎಸ್ ಪಿ ದರ್ಜೆಗಿಂತ ಕಡಿಮೆಯಿಲ್ಲದ ಪೊಲೀಸ್ ಅಧಿಕಾರಿ ಓಂಬಡ್ಸ್ ಮನ್ ಆಗಿ ನೇಮಕ ಮಾಡಬೇಕು.
ಸಾಲಕ್ಕೆ ಸಂಬಂಧಿಸಿದಂತೆ ಕರಾರು ಪತ್ರ ಮಾಡಿಕೊಳ್ಳಬೇಕು.
ಸಾಲಗಾರರಿಂದ ಯಾವುದೇ ಅಡಮಾನ, ಗಿರವಿ ಭದ್ರತೆ ಇರಿಸಿಕೊಳ್ಳುವಂತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ