ವಾಣಿಜ್ಯ ಟ್ಯಾಕ್ಸ್ ವಿರುದ್ಧ ಆಕ್ರೋಶ: ಇಂದು, ನಾಳೆ ಏನೆಲ್ಲಾ ಬಂದ್

Krishnaveni K

ಬುಧವಾರ, 23 ಜುಲೈ 2025 (10:27 IST)
Photo Credit: X
ಬೆಂಗಳೂರು: ರಾಜ್ಯದಲ್ಲಿ ಸಣ್ಣ ವ್ಯಾಪಾರಿಗಳು ವಾಣಿಜ್ಯ ಟ್ಯಾಕ್ಸ್ ನೋಟಿಸ್ ವಿರುದ್ಧ ಸಿಡಿದೆದ್ದಿದ್ದು ಇಂದು ಮತ್ತು ನಾಳೆ ಏನೆಲ್ಲಾ ಬಂದ್ ಆಗಲಿದೆ ಇಲ್ಲಿದೆ ನೋಡಿ ವಿವರ.

ಬೇಕರಿ, ಕಾಂಡಿಮೆಂಟ್ ಅಂಗಡಿ ಮಾಲಿಕರು ಇಂದು ಪ್ರತಿಭಟನೆ ನಡೆಸುತ್ತಿವೆ. ವಾಣಿಜ್ಯ ತೆರಿಗೆ ಇಲಾಖೆಗಳ ನೋಟಿಸ್ ಬೆನ್ನಲ್ಲೇ ಬೇಕರಿ ಕಾಂಡಿಮೆಂಟ್ ಅಂಗಡಿಗಳಲ್ಲಿ ಇಂದು ಹಾಲು, ಹಾಲಿನ ಉತ್ಪನ್ನಗಳ ಮಾರಾಟ ಬಂದ್ ಮಾಡಿ ಪ್ರತಿಭಟನೆ ನಡಸುತ್ತಿವೆ.

ದೈನಂದಿನ ನೌಕರರು ಹಾಲು, ಟೀ, ಕಾಫಿ ಕುಡಿಯಲು ಸಣ್ಣ ಪುಟ್ಟ ಕಾಂಡಿಮೆಂಟ್ ಅಂಗಡಿಗಳನ್ನು ಆಶ್ರಯಿಸುತ್ತಾರೆ. ಆದರೆ ಇಂದು ಮತ್ತು ನಾಳೆ ಈ ಉತ್ಪನ್ನಗಳು ಇಂತಹ ಅಂಗಟಿಗಳಲ್ಲಿ ಸಿಗಲ್ಲ. ಅಷ್ಟೇ ಅಲ್ಲ ಕಾರ್ಮಿಕ ಪರಿಷತ್ ನಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಯಲಿದೆ.

ಕ್ಯಾಂಡಿಮೆಂಟ್ ಅಂಗಡಿಗಳಲ್ಲಿ ಕಾಫಿ, ಟೀ ಸೇವನೆಗೆಂದೇ ಸಾಕಷ್ಟು ಜನ ಬರುತ್ತಾರೆ. ಇದನ್ನು ಬಂದ್ ಮಾಡುವುದರಿಂದ ವರ್ತಕರಿಗೆ ನಷ್ಟವಾಗಲಿದೆ. ಹಾಗಿದ್ದರೂ ನ್ಯಾಯ ಸಿಗಬೇಕು, ಅಸಮಂಜಸ ವಾಣಿಜ್ಯ ತೆರಿಗೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ