ಅಗ್ನಿ ಅವಘಡದಲ್ಲಿ ಗಾಯಗೊಂಡ ಸಿಬ್ಬಂದಿಗಳು ಗುಣಮುಖ-ತುಷಾರ್ ಗಿರಿನಾಥ್

ಸೋಮವಾರ, 21 ಆಗಸ್ಟ್ 2023 (14:14 IST)
ಬಿಬಿಎಂಪಿ ಆವರಣದ ಬೆಂಕಿ ಅವಗಡಕ್ಕೆ ಒಳಗಾದ ಸಿಬ್ಬಂದಿಗಳು ಗುಣಮುಖರಾಗುತ್ತಿದ್ದಾರೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.ಡಾಕ್ಟರ್ಸ್ ಗಳು ಈಗಾಗಲೇ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.ಚಿಕಿತ್ಸೆಗಾಗಿ ಬೇರೆಡೆಗೆ ಶಿಫ್ಟ್ ಮಾಡುವಂತಹ ಸಂದರ್ಭ ಬಂದರೆ ಅದಕ್ಕೂ ಕೂಡ ಸಿದ್ದರಿದ್ದೇವೆ.ಚಿಕಿತ್ಸೆಗೆ ಏನಾದರೂ ಕೊರತೆ ಬಿದ್ದರೆ ಅದನ್ನು ಬರಿಸಲು ಬಿಬಿಎಂಪಿ ಸಿದ್ಧವಾಗಿದೆ.ಎಲ್ಲರೂ ಕೂಡ ಗುಣಮುಖರಾಗಿದ್ದಾರೆ  ಜ್ಯೋತಿ ಹಾಗೂ ಶಿವಕುಮಾರ್ ಅವರು ಕೂಡ ಗುಣಮುಖರಾಗಿದ್ದಾರೆ .ಕೆಲವರು ಇವರಿಬ್ಬರ ಸ್ಥಿತಿ ಗಂಭೀರ ಇದೆ ಎಂದು ಹೇಳುತ್ತಿದ್ದಾರೆ  ಆದರೆ ಆತರ ಯಾವುದು ಇಲ್ಲ.ದಿನನಿತ್ಯ ಆರೋಗ್ಯದಲ್ಲಿ ಏರುಪೇರು ಆಗುವುದು ಸಹಜ .ಡಾಕ್ಟರ್ ಗಳು ಕೂಡ ತಮ್ಮ ಎಲ್ಲಾ ಶ್ರಮವನ್ನು ಹಾಕಿ ಚಿಕಿತ್ಸೆಯನ್ನು ನೀಡುತ್ತಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ