242 ರಿಂದ 225 ಕ್ಕೆ ಇಳಿಸಿದ ಬಿಬಿಎಂಪಿ ವಾರ್ಡ್ ಗಳ ಸಂಖ್ಯೆ

ಶನಿವಾರ, 19 ಆಗಸ್ಟ್ 2023 (20:00 IST)
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೊದಲು 198 ಇದ್ದ ವಾರ್ಡ್ ಗಳ ಸಂಖ್ಯೆಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ 243ಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಸ್ತಿತದಲ್ಲಿ ಇದ್ದ ಬಿಬಿಎಂಪಿಯ 198 ವಾರ್ಡ್‌ಗಳನ್ನು 243ಕ್ಕೆ ಹೆಚ್ಚಿಸಿರೋದರಿಂದ. ವಾರ್ಡ್‌ ಮರುವಿಂಗಣೆ ಕುರಿತಂತೆ ಅಸಮಾಧಾನ ವ್ಯಕ್ತ ಪಡಿಸಿ ಮಾಜಿ ಕಾರ್ಪೊರೇಟರ್ ಸೇರಿ ಹಲವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆಗ ಇರುವ ಲೋಪ ದೋಷಗಳನ್ನು ಸರಿ ಮಾಡಿ ಮತ್ತೆ ಸಲ್ಲಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಇನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಾರ್ಡ್ ವಿಂಗಡಣೆ ಮರು ಪರಿಷ್ಕರಣೆಗೆ ಆದೇಶ ನೀಡಿತ್ತು. 

ಇನ್ನೂ ಕೊನೆಗೆ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸರ್ಕಾರ ಸಮಿತಿ ರಚನೆ ಮಾಡಿ ವಾರ್ಡ್ ಪುನರ್ ವಿಂಗಡಣೆ ಮಾಡಿದೆ. ಬಿಜೆಪಿ ಶಾಸಕರು ಇರುವ ಕಡೆ ಬಹುತೇಕ ವಾರ್ಡ್ ಕಡಿತಗೊಳಿಸಲಾಗಿದೆ. ಈ ಬಾರಿ 18 ವಾರ್ಡ್ ಕಡಿತ ಮಾಡಿ 225 ವಾರ್ಡ್ ಕರಡು ಪ್ರತಿ ಪ್ರಕಟ ಮಾಡಲಾಗಿದ್ದು,  ಇನ್ನೂ ನಗರಾಭಿವೃದ್ಧಿ ಇಲಾಖೆಯಿಂದ ಪ್ರಕಟಿಸಿದ ಅಧಿಸೂಚನೆ ಅನ್ವಯ ವಾರ್ಡ್ ಗಳ ಹೆಸರು ಇನ್ನಿತರ ವಿಷಯಗಳು ಸಂಬಂಧಿಸಿದ ಆಕ್ಷೇಪಣೆಗಳನ್ನು 15 ದಿನಗಳ ಒಳಗೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರ ಅಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, ನಾಲ್ಕನೇ ಮಹಡಿ, ವಿಕಾಸ ಸೌಧ ಬೆಂಗಳೂರು ವಿಳಾಸಕ್ಕೆ ತಲುಪಿಸಬೇಕಿದೆ. ಹಳೆ ವಾರ್ಡ್,ಹಾಗೂ ಹೊಸ ವಾರ್ಡ್ ಗಳ ಬದಲಾವಣೆ ಕುರಿತ ಮಾಹಿತಿಗೆ ವೆಬ್ಸೈಟ್ ಗಮನಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ