ಖಾಸಗಿ ಆಸ್ಪತ್ರೆಯ ಮಾಹಿತಿ ಕದ್ದ ಹ್ಯಾಕರ್ಸ್!

ಮಂಗಳವಾರ, 30 ನವೆಂಬರ್ 2021 (10:32 IST)
ಮೈಸೂರು : ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ, ಹ್ಯಾಕರ್ ಶ್ರೀಕಿ ಪ್ರಕರಣಗಳು ಸದ್ದು ಮಾಡುತ್ತಿವೆ. ಈ ನಡುವೆ ಮೈಸೂರಿನ ಖಾಸಗಿ ಆಸ್ಪತ್ರೆಯ ಮಾಹಿತಿಯನ್ನು ಅಪರಿಚಿತರು ಹ್ಯಾಕ್ ಮಾಡಿದ್ದಾರೆ.
ಈ ಸಂಬಂಧ ಖಾಸಗಿ ಆಸ್ಪತ್ರೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಮುಖ್ಯ ಹಣಕಾಸು ಸರ್ವರ್ ಮತ್ತು ರೋಗಿಗಳ ಡೇಟಾವನ್ನು ಅಪರಿಚಿತ ವ್ಯಕ್ತಿಗಳು ಹ್ಯಾಕ್ ಮಾಡಿದ್ದಾರೆ ಎಂದು ಆಸ್ಪತ್ರೆ ದೂರಿನಲ್ಲಿ ದಾಖಲಿಸಿದೆ. ಈ ಸಂಬಂಧ ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ  ಪೊಲೀಸರನ್ನು ಆಸ್ಪತ್ರೆ ಸಂಪರ್ಕಿಸಿದೆ
ಆಸ್ಪತ್ರೆಯ ಡೇಟಾ ಕದ್ದಿರುವ ಹ್ಯಾಕರ್ ಗಳು ಬಿಟ್ ಕಾಯಿನ್ ಮೂಲಕ ಹಣ ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ ಇದನ್ನು ಪೊಲೀಸರು ಖಚಿತಪಡಿಸಿಲ್ಲ. ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ