ಅರ್ಧ ವರ್ಷ ಶಾಲೆ ಮುಗೀತಾ ಬಂದ್ರು ಸಿಕ್ಕಿಲ್ಲ ಮಕ್ಕಳಿಗೆ ಪಠ್ಯ ಪುಸ್ತಕ

ಗುರುವಾರ, 15 ಸೆಪ್ಟಂಬರ್ 2022 (20:17 IST)
ಅರ್ಧ ವರ್ಷ ಮುಗೀತಾ ಬಂದ್ರು ಮಕ್ಕಳಿಗೆ ಪಠ್ಯಪುಸ್ತಕ ಮಾತ್ರ ಸಿಗ್ತಿಲ್ಲ.ಪಠ್ಯಪುಸ್ತಕ  ಇಲ್ಲದೆ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಆಗದ ಸ್ಥಿತಿಗೆ ಶಿಕ್ಷಕರು ತಲುಪಿದ್ದಾರೆ.ಇನ್ನೂ 9  ಹಾಗೂ 10 ನೇ ತರಗತಿ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಇಲ್ಲ.ಪರಿಷ್ಕೃತ ಪಠ್ಯ ಪುಸ್ತಕವನ್ನ ಶಿಕ್ಷಣ ಇಲಾಖೆ ಇನ್ನು ಮಕ್ಕಳಿಗೆ ಕಳುಹಿಸಿ ಕೊಟಿಲ್ಲ.ಕಲ್ಯಾಣ ಕರ್ನಾಟಕದ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಪಠ್ಯ ಪುಸ್ತಕ ಕೊಡದ ಶಿಕ್ಷಣ ‌ಇಲಾಖೆಯ ವಿರುದ್ಧ ಖಾಸಗಿ ಶಾಲಾ ಒಕ್ಕೂಟ ಗರಂ ಆಗಿದೆ. ಅಷ್ಟೇ ಅಲ್ಲದೆ 9 ನೇ ತರಗತಿಯ ಮಕ್ಕಳಿಗೆ ಸಮಾಜ ವಿಜ್ಞಾನ ಹಾಗೂ 10 ನೇ ತರಗತಿಯ ಕನ್ನಡ ಪಠ್ಯಪುಸ್ತಕ ಪುಸ್ತಕ ಸಿಕ್ಕಿಲ್ಲ.ಶೈಕ್ಷಣಿಕ ವರ್ಷ ಪ್ರಾರಂಭವಾಗಿ ನಾಲ್ಕು ತಿಂಗಳು ಕಳೆದಿದೆ.ಆದ್ರೆ ಶಿಕ್ಷಣ ಇಲಾಖೆ ಇದುವರೆಗೂ ಪರಿಷ್ಕೃತ ಪಠ್ಯಪುಸ್ತಕ ಶಾಲೆಗಳಿಗೆ ಕೊಟ್ಟಿಲ್ಲವೆಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. 
 
ಮಕ್ಕಳಿಗೆ ಪಠ್ಯಪುಸ್ತಕ ಕೊಡದೇ ಯಾವುದೇ ಉಪಯೋಗವಾಗ್ತಿಲ್ಲ . ಶಿಕ್ಷಕರು ಮಕ್ಕಳಿಗೆ ಪಾಠ ಮಾಡಲಾಗದೇ ಪರದಾಡ ನಡೆಸುವಂತಾಗಿದೆ ಎಂದು  ಖಾಸಗಿ ಶಾಲೆಗಳ ಒಕ್ಕೂಟದ ರುಪ್ಸಾ ರಾಜ್ಯಧ್ಯಕ್ಷ ಲೋಕೇಶ್ ತಾಳಿಕಟ್ಟೆ ಕಿಡಿಕಾರಿದ್ದಾರೆ.ಶಿಕ್ಷಣ ಇಲಾಖೆ ಪಠ್ಯಪುಸ್ತಕ ಕೊಡದ ಬಗ್ಗೆ ಸಿಎಂಗೆ ಪತ್ರ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪತ್ರ ಬರೆದು ಸಾಕಷ್ಟು ಭಾರಿ ಮನವಿ ಮಾಡಿಕೊಂಡ್ರು. ಪಠ್ಯಪುಸ್ತಕ  ಮಾತ್ರ ಕೊಟ್ಟಿಲ್ಲ.ಹೀಗಾಗಿ ಪಠ್ಯಪುಸ್ತಕ ಸಿಗದೆ‌‌ ಬಗ್ಗೆ ಖಾಸಗಿ ಶಾಲೆಗಳಿಂದ ವ್ಯಾಪಕ ಅಸಾಮಾಧಾನ ಕೇಳಿಬರುತ್ತಿದೆ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ