ವೈಟ್ ಟಾಪಿಂಗ್ ಹೆಸರಿನಲ್ಲಿ ಆವಿನ್ಯೂ ರೋಡ್ ನ ಅರ್ಧಬಾರ್ದ ಕಾಮಗಾರಿ

ಬುಧವಾರ, 1 ಸೆಪ್ಟಂಬರ್ 2021 (20:23 IST)
ಬೆಂಗಳೂರು: ರಾಜಧಾನಿಯ ಹೃದಯಭಾಗದಲ್ಲಿರುವ ರಸ್ತೆ ಅವ್ಯವಸ್ತೆಯ ಆಗರವಾಗಿದೆ. ಕಳೆದ ಒಂದು ವರ್ಷದಿಂದ ಬೆಂಗಳೂರಿನ ವ್ಯಾಪಾರ ಕೇಂದ್ರವಾಗಿರುವ ಆವಿನ್ಯೂ ರಸ್ತೆ ವೈಟ್ ಟಾಪಿಂಗ್ ಹೆಸರಲ್ಲಿ ಕಾಮಗಾರಿ ಕುಂಠಿತಗೊಂಡು ಸ್ಥಳೀಯ ವ್ಯಾಪಾರಿಗಳು ಬಿದ್ದಿಗೆ ಬಿದ್ದಿದ್ದಾರೆ,ಅಷ್ಟೇ ಅಲ್ಲದೆ ಜನರು ಕೂಡ ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ. 
 
ಸಿಲಿಕಾನ್ ಸಿಟಿಯ ವ್ಯಾಪಾರ ಕೇಂದ್ರಬಿಂದುವಾದ ಆವಿನ್ಯೂ ರಸ್ತೆ ಕಳೆದ ಒಂದು ವರ್ಷದಿಂದ ವೈಟ್ ಟಾಪಿಂಗ್ ಹೆಸರಿನಲ್ಲಿ ಬಿಬಿಎಂಪಿ ಕಾಮಗಾರಿ ಕಂಪ್ಲೀಟ್ ಮಾಡದೇ ಬೇರೆ ಇಲಾಖೆಯ ಮೇಲೆ ಬೋಟ್ಟು ಮಾಡುತ್ತಿದೆ. ಬಿಬಿಎಂಪಿ ಹಾಗೂ ಇತರೆ ಇಲಾಖೆಯ ಒಳಜಗಳ ವ್ಯಾಪಾರಸ್ಥರಿಗೆ ಹಾಗೂ ಸ್ಥಳೀಯ ಜನರಿಗೆ ನರಕ ಸದೃಷ್ಯ ಉಂಟುಮಾಡಿದೆ.ಅಧಿಕಾರಿಗಳ ಒಳಜಗಳದಿಂದ ಜನರು ಸಮಸ್ಯೆ ಅನುಭವಿಸುವಂತೆಯಾಗಿದೆ.
ಹೌದು, ಕಳೆದ ಎರಡುವರ್ಷದಿಂದ ಕೊರೊನಾ ಮಹಾಮರಿ ಬಿಗಾಡಯಿಸಿ ರಾಜ್ಯದ ಆರ್ಥಿಕ ಪರಿಸ್ಥಿತಿ ಒಂದು ಕಡೆ ಕುಸಿದಿದ್ರೆ ,ಮತ್ತೊಂದು ಕಡೆ ವ್ಯಾಪಾರಸ್ಥರು ನಷ್ಟದ ಮೇಲೆ ನಷ್ಟ ಅನುಭವಿಸಿದ್ದಾರೆ. ಅಷ್ಟೇ ಅಲ್ಲದೆ ಕೊರೊನಾ ಟೈಮ್ ನಲ್ಲಿ , ಲಾಕ್ ಡೌನ್ ಸಂದರ್ಭದಲ್ಲಿ ಕಾಮಗಾರಿಯನ್ನ ತ್ವರಿತಗತಿಯಲ್ಲಿ ಮಾಡಬಹುದಿತ್ತು. ಆದ್ರೆ ಇವರು ಕಾಮಗಾರಿ ಮಾಡದೆ ಹಾಗೆ ಬಿಟ್ಟಿದ್ದಾರೆ. ಬೇಕಾಬಿಟ್ಟಿ ಕಾಮಗಾರಿ ಮಾಡುವ ಮೂಲಕ ಅಲ್ಲಲ್ಲಿ ಗುಂಡಿ ತೋಡಿಬಿಟ್ಟಿದ್ದಾರೆ.ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ರೆ ಇದು ಈ ರಸ್ತೆಯಲ್ಲಿ ಹಾಕಿರುವ ಟ್ರೈನೇಜ್ ಪೇಪ್ ಗಳು ಮೂರು ವರ್ಷದ ಹಳೆಯದ್ದು , ಅವುಗಳನ್ನ ತೆರವು ಮಾಡಿ ಹೊಸ ಪೈಪ್ ಗಳ ಜೋಡಣೆ ಮಾಡುವುದಕ್ಕೆ ತಡವಾಗುತ್ತಿದೆ . ಹೀಗಾಗಿ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಬೇರೆ ಇಲಾಖೆಯ ಮೇಲೆ ಹೊಣೆ ಹೊರೆಸುತ್ತಿದ್ದಾರೆ.  ಇನ್ನೂ ಈ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುವುದಕ್ಕೆ ಬಹಳ ತೊಂದರೆ ಉಂಟಾಗಿದ್ದು . ಕೆಲ ವಯಸ್ಸಾದ ವೃದ್ಧರು ಗುಂಡಿಗೆ ಬಿದ್ದು ಸಣ್ಣ ಪುಣ್ಣ ಗಾಯವನ್ನು ಕೂಡ ಮಾಡಿಕೊಂಡಿದ್ದಾರೆ. ಹೀಗೆ ಕಾಮಗಾರಿ ಮುಂದುವರೆಸಿದ್ರೆ ಇನ್ನೂ ಮೂರು ವರ್ಷವಾದ್ರು ಕಾಮಗಾರಿ ಮುಗಿಯಲ್ಲ ಎಂದು ಬಿಬಿಎಂಪಿ ಮೇಲೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಮಾರ್ಕೇಟ್ ನ ಆವಿನ್ಯೂ ರಸ್ತೆ ಅತೀ ಹೆಚ್ಚು ಜನನಿಬಿಡ ಪ್ರದೇಶ . ಇಲ್ಲಿ ಪ್ರತಿನಿತ್ಯ ಸಾವಿರಾರು ಜನರು ಓಡಾಡುತ್ತಾರೆ. ಅಗತ್ಯ ವಸ್ತುಗಳು ಇಲ್ಲಿ ಒಂದೇ ಕಡೆ ಸಿಗುತ್ತೆ ಎಂದು ರಾಜಧಾನಿಯ ಸುತ್ತ-ಮುತ್ತಲಿನ ಜನ ಇಲ್ಲಿ ತಮ್ಮಗೆ ಬೇಕಾದ ಸಾಮಾಗ್ರಿಗಳನ್ನ ಕೊಳ್ಳುವುದಕ್ಕೆ ಬರುತ್ತಾರೆ. ಆದ್ರೆ ಈ ಹಿಂದೆ ಇಲ್ಲಿ ಕಾಲಿಡಲಾಗದಂತಹ ಮಟ್ಟಿಗೆ ಜನ ಬರುತ್ತಿದ್ರ. ಆದ್ರೆ ಇಂತಹ ರಸ್ತೆ ಈಗ ಸಮಸ್ಯೆಗಳಿಂದ ಕೂಡಿದೆ. ಹೀಗಾಗಿ ಇಲ್ಲಿನ ಸುತ್ತ-ಮುತ್ತ ಜನಸಾಮಾನ್ಯರು ರೊಚ್ಚಿಗೆದ್ದು  ಸರ್ಕಾರಕ್ಕೆ ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ .ಒಟ್ನಲಿ ಸಾಲು ಸಾಲು ಸಮಸ್ಯೆಗಳಿಂದ ಕೂಡಿರುವ ಆವಿನ್ಯೂ ರಸ್ತೆಯ ಕಾಮಗಾರಿ ಮಾಡುವ ಕಡೆ ಸಂಬಂಧಪಟ್ಟ ಅಧಿಕಾರಿಗಳು ಹಮನಹರಿಸಬೇಕಿದೆಬೇಕಿದೆ. ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೇತ್ತುಕೊಂಡು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ತಾರಾ?ಎಂಬುದನ್ನ ಕಾದು ನೋಡಬೇಕಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ