ಸರ್ಕಾರಕ್ಕೆ ಬಿಬಿಎಂಪಿ ಶಿಕ್ಷಣ ಸಂಸ್ಥೆಗಳ ಹಸ್ತಾಂತರ?

ಶುಕ್ರವಾರ, 22 ಡಿಸೆಂಬರ್ 2023 (15:00 IST)
ಬಿಬಿಎಂಪಿಯ ಶಾಲಾ ಕಾಲೇಜುಗಳನ್ನು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರ ಚಿಂತನೆ ನಡೆಸಿದೆ. BBMP ಶಾಲಾ-ಕಾಲೇಜುಗಳಿಗೆ ಕೋಟಿ-ಕೋಟಿ ಹಣ ಮೀಸಲಿಟ್ಟರೂ ಸಹ ಅಭಿವೃದ್ಧಿ ಮಾತ್ರ ಶೂನ್ಯವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.. ಪಾಲಿಕೆ ವ್ಯಾಪ್ತಿಯಲ್ಲಿ 159 ಶಾಲಾ-ಕಾಲೇಜುಗಳಿವೆ. ವರ್ಷಕ್ಕೆ ನೂರಾರು ಕೋಟಿ ಬಜೆಟ್‌ ಮೀಸಲಿಟ್ರೂ ಸಹ ವ್ಯರ್ಥವಾಗ್ತಿದೆ. ಇದರಿಂದ 198 ವಾರ್ಡ್ ನಿರ್ವಹಿಸೋ BBMPಗೆ ಶಿಕ್ಷಣ ಹೊರೆಯಾಯ್ತ ಎಂಬ ಪ್ರಶ್ನೆ ಮೂಡಿದೆ

. ಶಾಲಾ-ಕಾಲೇಜುಗಳನ್ನ ಅಭಿವೃದ್ಧಿ ಮಾಡಲು ಪಾಲಿಕೆ ವಿಫಲವಾದ ಹಿನ್ನೆಲೆ ಶಾಲಾ-ಕಾಲೇಜುಗಳನ್ನ ಸರ್ಕಾರದ ಸುಪರ್ದಿಗೆ ನೀಡಲು ಚಿಂತನೆ ನಡೆದಿದೆ ಎಂದು ಬಿಬಿಎಂಪಿ  ನೀಡಿವೆ. ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ, BBMP ಆಯುಕ್ತರ ಜೊತೆ ಚರ್ಚೆ ನಡೆಸಲಿದ್ದಾರೆ..ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬಿಬಿಎಂಪಿ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ