ಮಹಿಳೆ ಮಾತಾಡಲಿಲ್ಲವೆಂದು ಪ್ಯಾಂಟ್ ಬಿಚ್ಚಿ ಮರ್ಮಾಂಗ ಪ್ರದರ್ಶನ ಮಾಡಿದ ಕಾಮುಕ ಅರೆಸ್ಟ್
ಸೋಮವಾರ, 14 ಜನವರಿ 2019 (12:16 IST)
ಬೆಂಗಳೂರು : ಕಾಮುಕನೊಬ್ಬ ಮಹಿಳೆ ಮಾತಾಡಲಿಲ್ಲ ಅಂತ ರಸ್ತೆಯಲ್ಲೆ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಜಸ್ಥಾನ ಮೂಲದ ಕೃಪಾರಾಮ್ ಈ ಕೃತ್ಯ ಎಸಗಿದ ಕಾಮುಕನಾಗಿದ್ದು, ಈತ ಬಾಗಲಗುಂಟೆ ಬಳಿ ಕಟ್ಟಡವೊಂದರಲ್ಲಿ ಗ್ರಾನೈಟ್ ಕೆಲಸ ಮಾಡುತ್ತಿದ್ದನು. ಈ ಹಿಂದೆ ಈತ ಅನೇಕ ಬಾರಿ ಮಹಿಳೆಯ ಮನೆಯ ಬಳಿ ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದನು. ಆದರೆ ಜನವರಿ 4ರಂದು ಮನೆ ಮುಂದೆ ಮಹಿಳೆ ಕಸಗುಡಿಸುವಾಗ ಬಂದು ಎದುರಿಗೆ ನಿಂತಿದ್ದಾನೆ. ಆದರೆ ಗೃಹಿಣಿ ಆತನತ್ತ ನೋಡಲಿಲ್ಲವೆಂದು ಕೋಪಗೊಂಡ ಆತ ತನ್ನ ಪ್ಯಾಂಟ್ ಬಿಚ್ಚಿ ಮರ್ಮಾಂಗ ಪ್ರದರ್ಶನ ಮಾಡಿದ್ದಾನೆ.
ಮಹಿಳೆ ತಕ್ಷಣ ಪತಿಗೆ ಈ ವಿಚಾರ ತಿಳಿಸಿ ಬಾಗಲಗುಂಟೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಕೃಪಾರಾಮನನ್ನ ಪೊಲೀಸರು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.