ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿದೆ 'ಮದ್ರಾಸ್ ಐ'

ಶನಿವಾರ, 29 ಜುಲೈ 2023 (16:35 IST)
ಬಿಸಿಲು-ಮಳೆ, ಮೋಡ ಕವಿದ ವಾತಾವರಣದಿಂದಾಗಿ  ಮದ್ರಾಸ್ ಐ ಪ್ರಕರಣ ನಗರದಲ್ಲಿ ಹೆಚ್ಚಳವಾಗಿದೆ.ನೇತ್ರ ಚಿಕಿತ್ಸಾಲಯಗಳಿಗೆ ಭೇಟಿ ನೀಡುತ್ತಿರುವ ಹೊರರೋಗಿಗಳಲ್ಲಿ ಶೇ 20 ರಷ್ಟು ಮಂದಿಯಲ್ಲಿ ಸಮಸ್ಯೆ  ಇದೆ. ಕಣ್ಣುರಿ, ಕಣ್ಣಿನಲ್ಲಿ ನೀರು, ತುರಿಕೆ, ಕಣ್ಣು ಕೆಂಪಾಗುವುದು, ಕಣ್ಣಿನ ಊತ ಸೇರಿ ವಿವಿಧ ಸಮಸ್ಯೆಗಳಿಂದ ಜನ ಆಸ್ಪತ್ರೆಗಳತ್ತ ಮೊರೆ ಹೋಗ್ತಿದ್ದಾರೆ.
 
ಬೆಂಗಳೂರಿನ ಕಣ್ಣಿನ ಆಸ್ಪತ್ರೆಗಳಾದ ಮಿಂಟೊ, ನಾರಾಯಣ ನೇತ್ರಾಲಯ, ಡಾ.ಅಗರವಾಲ್ಸ್ ಐ ಹಾಸ್ಪಿಟಲ್, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆ ಶೇ 10ರಷ್ಟು ಹೆಚ್ಚಳವಾಗಿದೆ.ಕಳೆದೊಂದು ತಿಂಗಳಿಂದ ನಗರದಲ್ಲಿ ಬಿಸಿಲು-ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಳವಾಗಿದೆ.ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾದರೆ, ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.ಚಳಿಯ ವಾತಾವರಣವಿದ್ದು, ವೇಗವಾಗಿ ವೈರಾಣು ಹರಡುತ್ತಿದೆ. 'ಮದ್ರಾಸ್ ಐ' ಸಮಸ್ಯೆ ಹಿರಿಯರಿಗಿಂತಲೂ ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತಿದೆ.
 
ಮಿಂಟೊ ಆಸ್ಪತ್ರೆಗೆ ಪ್ರತಿ ನಿತ್ಯ 400ರಿಂದ 600 ಹೊರರೋಗಿಗಳು ಭೇಟಿ ನೀಡಿದ್ದಾರೆ.90ರಿಂದ 100 ರೋಗಿಗಳಲ್ಲಿ ಈ ಸಮಸ್ಯೆ ದೃಢಪಟ್ಟಿದೆ.ನಾರಾಯಣ ನೇತ್ರಾಲಯದಲ್ಲಿ ಪ್ರತಿನಿತ್ಯ ಸರಾಸರಿ 20 ಪ್ರಕರಣಗಳು ವರದಿಯಾಗಿದೆ.
 
'ಮದ್ರಾಸ್ ಐ' ಲಕ್ಷಣಗಳು
 
* ಕಣ್ಣುಗುಡ್ಡೆಯ ಊತ 
* ರೆಪ್ಪೆ ಅಂಟಿಕೊಳ್ಳುವುದು
* ಕಣ್ಣಿನ ಬಣ್ಣ ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗುವುದು
* ಕಣ್ಣಲ್ಲಿ ಅತಿಯಾಗಿ ನೀರು ಬರುವಿಕೆ
* ಕಣ್ಣು ಅತಿಯಾಗಿ ತುರಿಕೆ ಆಗುವಿಕೆ..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ