ಬಿಸಿನೀರು ಬರೋ ಬೋರವೆಲ್ ನೋಡಿದ್ದೀರಾ?

ಮಂಗಳವಾರ, 30 ಜುಲೈ 2019 (16:56 IST)

ಬೋರ್ ವೆಲ್ ಅಂದರೆ ಅದರಲ್ಲಿ ತಣ್ಣೀರು ಬರೋದು ಸಹಜ. ಆದರೆ ಅದೇ ಬೋರವೆಲ್ ನಲ್ಲಿ ಬಿಸಿನೀರು ಬಂದರೆ ಹೇಗಾಗಬೇಡಾ?

ಇಂತಹ ಒಂದು ಕುತೂಹಲಕರ ಬೋರವೆಲ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಬೋರವೆಲ್ ನಲ್ಲಿ ಬಿಸಿನೀರು ಬರ್ತಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ಹತ್ತಿರದ ಚಂದಾಪುರದಲ್ಲಿ ಇಂತಹ ಬೋರವೆಲ್ ಕಂಡು ಬಂದಿದೆ.

ಶಿವಕುಮಾರ ಎಂಬೋರ ಮನೆಯಲ್ಲಿ ಬೋರ್ ವೆಲ್ ಹೊಸದಾಗಿ ಕೊರೆಸಿದ್ದಾರೆ. ಅದರಲ್ಲಿ ನೀರು ಬಿಸಿಯಾಗಿ ಬರ್ತಿರೋದು ವಿಶೇಷ ಎನಿಸಿದೆ.

ಅಧಿಕಾರಿಗಳು ಬೋರ್ ವೆಲ್ ಪರೀಕ್ಷಿಸಿದ್ದು, ಇದೀಗ ಭೂ ವಿಜ್ಞಾನಿಗಳು ಪರಿಶೀಲನೆ ಮಾಡಿದ ಬಳಿಕ ಬಿಸಿನೀರಿನ ವಿಶೇಷತೆ ಬಗ್ಗೆ ಗೊತ್ತಾಗಲಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ