ಅಸಹಜ ಸೆಕ್ಸ್ ಮಾಡಿ ಫೋಟೋ ರವಾನಿಸಿದ ವ್ಯಕ್ತಿಯ ವಿರುದ್ಧ ತನಿಖೆಗೆ ಕೋರ್ಟ್ ಆದೇಶ
ಬುಧವಾರ, 1 ಜೂನ್ 2022 (09:50 IST)
ಬೆಂಗಳೂರು: ಪತ್ನಿಯ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಅವುಗಳ ಫೋಟೋ ತೆಗೆದು ಆಕೆಯ ತಂದೆ, ಸ್ನೇಹತರಿಗೇ ಕಳುಹಿಸಿ ಕಿರುಕುಳ ನೀಡಿದ್ದ ಪತಿಯ ವಿರುದ್ಧ ಹೈಕೋರ್ಟ್ ತನಿಖೆಗೆ ಆದೇಶಿಸಿದೆ.
2013 ರಲ್ಲಿ ದಂಪತಿ ವಿವಾಹವಾಗಿದ್ದರು. ಆದರೆ ಈತನ ಕಾಟದಿಂದಾಗಿ ಮಹಿಳೆ ಗಂಡನಿಂದ ಪ್ರತ್ಯೇಕವಾಗಿದ್ದಳು. ಮತ್ತೆ ಮನ ಒಲಿಸಿ ಮನೆಗೆ ಕರೆದುಕೊಂಡು ಹೋಗಿದ್ದ ಪತಿ ಅದೇ ಚಾಳಿ ಮುಂದುವರಿಸಿದ್ದ. ಇದರಿಂದ ಬೇಸತ್ತ ಮಹಿಳೆ ಶಾಶ್ವತವಾಗಿ ಆತನಿಂದ ದೂರವಾಗಿದ್ದಳು.
ಆದರೆ ಇದಕ್ಕೆ ಆಕ್ರೋಶಗೊಂಡ ಪತಿ ಆಕೆಯ ಜೊತೆಗಿನ ಖಾಸಗಿ ಫೋಟೋಗಳನ್ನು ತಂದೆ ಮತ್ತು ಆಕೆಯ ಸ್ನೇಹತರಿಗೆ ರವಾನಿಸಿದ್ದ. ಈತನ ವಿಕೃತಿ ವಿರುದ್ಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು. ಆದರೆ ಪೊಲೀಸರು ಸರಿಯಾಗಿ ತನಿಖೆ ನಡೆಸಿರಲಿಲ್ಲ. ಇದರ ಬಗ್ಗೆ ಮಹಿಳೆ ಕೋರ್ಟ್ ಮೊರೆ ಹೋಗಿದ್ದಳು. ಈಗ ಹೈಕೋರ್ಟ್ ಕಳಪೆ ತನಿಖೆಗೆ ಗರಂ ಆಗಿದ್ದು, ಸರಿಯಾಗಿ ತನಿಖೆ ನಡೆಸುವಂತೆ ಆದೇಶ ನೀಡಿದೆ.