ಗರ್ಭಿಣಿ ಮಹಿಳೆಯ ಪಾನೀಯಕ್ಕೆ ಔಷಧಿ ಬೆರೆಸಿ ಗರ್ಭಪಾತ ಮಾಡಿಸಿದ ಪ್ರಿಯಕರ

ಬುಧವಾರ, 1 ಜೂನ್ 2022 (09:00 IST)
ಪಾಟ್ನಾ: ಮಹಿಳೆಯೊಂದಿಗೆ ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿದ ವ್ಯಕ್ತಿ ಆಕೆ ಗರ್ಭಿಣಿ ಎಂದು ತಿಳಿದ ಮೇಲೆ ಪಾನೀಯಕ್ಕೆ ಔಷಧಿ ಬೆರೆಸಿ ಗರ್ಭಪಾತ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ.
 

ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವ್ಯಕ್ತಿ ತನ್ನ ಸಹೋದರಿಯ ಗೆಳತಿಗೆ ಈ ರೀತಿ ವಂಚನೆ ಮಾಡಿದ್ದಾನೆ.

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ ವ್ಯಕ್ತಿ ಆಕೆ ಗರ್ಭಿಣಿಯಾಗುತ್ತಿದ್ದಂತೇ ಬೇರೆಯೇ ನಾಟಕವಾಡಿದ್ದಾನೆ. ಮದುವೆಯಾಗುವಂತೆ ಮಹಿಳೆ ಒತ್ತಾಯಿಸಿದಾಗ ನಿರಾಕರಿಸಿದ್ದಾನೆ. ಬಳಿಕ ಆಕೆಗೆ ಉಪಾಯವಾಗಿ ಗರ್ಭಪಾತ ಮಾಡಿಸಿದ್ದಾನೆ. ಇದೀಗ ಮಹಿಳೆಯ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ