ಮುಡಾ ಹಗರಣ ಹೊರಹಾಕಿದ್ದ ಕಾಂಗ್ರೆಸ್ ಅಧ್ಯಕ್ಷರೇ: ಡಿಕೆಶಿ ವಿರುದ್ಧ ಕುಮಾರಸ್ವಾಮಿ ಆರೋಪ
ತಮ್ಮ ಮೇಲೆ ಬೆಂಬಲಿಗರನ್ನು ಛೂ ಬಿಟ್ಟು ಕತ್ತಿ ಮಸೆಯುತ್ತಿದ್ದ ಸಿದ್ದರಾಮಯ್ಯ ವಿರುದ್ಧ ಡಿಕೆ ಶಿವಕುಮಾರ್ ಅವರೇ ಈ ಕೆಲಸ ಮಾಡಿಸಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ. ಇಲ್ಲ ಅಂದರೆ ಇಷ್ಟು ದಿನ ಹೊರಬಾರದ ಹಗರಣ ಈಗ ಹೊರ ಬರಲು ಕಾರಣವೇನು ಎಂದು ಅವರು ಚುಚ್ಚಿದ್ದಾರೆ.
ಬಿಜೆಪಿಯವರು ಹಗರಣದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆದರೆ ಈ ಹಗರಣ ಹೊರಬೀಳಲು ಕಾಂಗ್ರೆಸ್ ನವರದ್ದೇ ಕುಮ್ಮಕ್ಕು ಇದೆ. ಈ ಬಗ್ಗೆ ನನಗೆ ಮಾಹಿತಿಯಿದೆ. ಸಿದ್ದರಾಮಯ್ಯಗೆ ಸೈಟು ಹೇಗೆ ಬಂತು ಎಂದು ನನಗೆ ಗೊತ್ತಿದೆ. 62 ಕೋಟಿ ರೂ. ಪರಿಹಾರ ಕೊಡಿ ಎನ್ನುತ್ತಿರುವ ಸಿದ್ದರಾಮಯ್ಯ ಮೊದಲು ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ ಕೊಡಿಸಲಿ ಎಂದು ಕುಮಾರಸ್ವಾಮು ಸವಾಲು ಹಾಕಿದ್ದಾರೆ.