ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಜನರ ಕ್ಷಮೆ ಕೇಳಿದ್ಯಾಕೆ?

ಮಂಗಳವಾರ, 23 ಜುಲೈ 2019 (19:05 IST)
ಮೈತ್ರಿ ಸರಕಾರದ ವಿಶ್ವಾಸ ಮತ ಚರ್ಚೆ ಸಂದರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ಜನರ ಕ್ಷಮೆ ಕೇಳಿದ್ದಾರೆ.

ವಿಧಾನಸಭೆ ಕಲಾಪ ಈ ಬಾರಿ ವಿಶೇಷವಾಗಿತ್ತು. ವಿರೋಧ ಪಕ್ಷ ಬಿಜೆಪಿ ಸದಸ್ಯರು ಚರ್ಚೆಯಲ್ಲಿ ಭಾಗವಹಿಸದೇ ಇರೋದು ಕೂಡ ದಾಖಲೆ ಎಂದು ಟಾಂಗ್ ನೀಡಿದ್ರು.

ಒಂದು ಆಶಾಭಾವನೆಯಿಂದ ಸದನದ ಕೆಲ ಸಮಯವನ್ನು ನಷ್ಟ ಮಾಡಿದ್ದೇವೆ ಎಂದು ಒಪ್ಪಿಕೊಂಡ ಕುಮಾರಸ್ವಾಮಿ, ತಾವು ರಾಜಕೀಯ ಬಂದ ಘಟನೆ, ಬೆಳವಣಿಗೆ ಹಾಗೂ ಪ್ರಸ್ತುತ ರಾಜಕಾರಣದ ಬಗ್ಗೆ ಮಾತನಾಡುತ್ತಲೇ  ಬಿಜೆಪಿ ಮುಖಂಡರಿಗೆ ಟಾಂಗ್ ನೀಡಿದ್ರು.

ರಾಜಕೀಯ ಮಾಡೋದು ನನಗೆ ಬೇಕಿರಲಿಲ್ಲ.  ಅನಿವಾರ್ಯ ಬಂದದ್ದಲ್ಲದೇ ಪತ್ನಿಯನ್ನು ಕರೆತಂದಿರುವೆ ಎಂದು ಸಭೆ ತಿಳಿಸಿ ನಗು ಮೂಡಿಸಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ