ಇಸ್ರೇಲ್ ಪ್ರವಾಸಕ್ಕೆ ತೆರಳಿರುವ ಎಚ್ ಡಿ ಕುಮಾರಸ್ವಾಮಿ

ಭಾನುವಾರ, 27 ಆಗಸ್ಟ್ 2017 (11:48 IST)
ಬೆಂಗಳೂರು: ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಕೃಷಿ ಕುರಿತ ಅಧ್ಯಯನಕ್ಕಾಗಿ ಇಸ್ರೇಲ್ ದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

 
ಕೃಷಿ ಹಾಗೂ ಪಶು ಸಂಗೋಪನೆ ಕ್ಷೇತ್ರದಲ್ಲಿ ಸುಧಾರಿತ ತಂತ್ರಜ್ಞಾನ ಬಳಸಿ ವ್ಯಾಪಕ ಅಭಿವೃದ್ಧಿ ಹೊಂದುತ್ತಿರುವ ದೇಶ ಇಸ್ರೇಲ್. ಈ ದೇಶದ ತಂತ್ರಜ್ಞಾನದ ಬಗ್ಗೆ ಅಧ್ಯಯನ ನಡೆಸುವ ಉದ್ದೇಶದಿಂದ ಎಚ್ ಡಿಕೆ ಹಾಗೂ ಕೆಲವು ಜೆಡಿಎಸ್ ನಾಯಕರು, ರೈತರ ನಿಯೋಗ ಪ್ರಯಾಣ ಬೆಳೆಸಿದೆ.

ನಿನ್ನೆ ಸಂಜೆ ವಿದೇಶಕ್ಕೆ ಹಾರಿದ ಇವರು ಸೆಪ್ಟೆಂಬರ್ 4 ರಂದು ವಾಪಸ್ಸಾಗಲಿದ್ದಾರೆ. ಅಲ್ಲಿನ ಕೃಷಿ, ನೀರಾವರಿ, ಪಶುಸಂಗೋಪನೆ ತಂತ್ರಜ್ಞಾನದ ಬಗ್ಗೆ ಅಧ್ಯಯನ ನಡೆಸಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ.

ಇದನ್ನೂ ಓದಿ.. ರಾಹುಲ್ ಗಾಂಧಿ ಅನಕ್ಷರಸ್ಥರಂತೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ