ಮದ್ದೂರು ಗಲಾಟೆ ಹಾಗಿರಲಿ, ಮೊದಲು ನಿಮ್ಮ ಆರೋಗ್ಯ ನೋಡ್ಕೊಳ್ಳಿ ಕುಮಾರಣ್ಣ ಎಂದ ಜನ

Krishnaveni K

ಸೋಮವಾರ, 8 ಸೆಪ್ಟಂಬರ್ 2025 (14:54 IST)
ಬೆಂಗಳೂರು: ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಇಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಆದರೆ ಕುಮಾರಸ್ವಾಮಿಯವರ ಆರೋಗ್ಯ ಸ್ಥಿತಿ ನೋಡಿ ನೆಟ್ಟಿಗರು ಮೊದಲು ನಿಮ್ಮ ಆರೋಗ್ಯ ನೊಡ್ಕೊಳ್ಳಿ ಕುಮಾರಣ್ಣ ಎಂದಿದ್ದಾರೆ.

ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಮುಸ್ಲಿಂ ಧರ್ಮಕ್ಕೆ ಸೇರಿದ ಕೆಲವು ಕಿಡಿಗೇಡಿಗಳು ಕಲ್ಲೆಸೆದಿದ್ದರು. ಇದರ ವಿರುದ್ಧ ಇದೀಗ ಇಡೀ ಮಂಡ್ಯವೇ ಹೊತ್ತಿ ಉರಿಯುತ್ತಿದೆ. ಮದ್ದೂರಿನಲ್ಲಿ ಭಾರೀ ಪ್ರತಿಭಟನೆಗಳಾಗಿವೆ.

ಇದರ ಬೆನ್ನಲ್ಲೇ ಕೇಂದ್ರ ಸಚಿವ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಮದ್ದೂರಿನಲ್ಲಿ ಆದ ಘಟನೆ ಕುರಿತು ಮುಲಾಜಿಲ್ಲದೇ ಪೊಲೀಸರು ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಖುದ್ದಾಗಿ ನಾನೇ ಬರುತ್ತೇನೆ ಎಂದಿದ್ದಾರೆ.

ಕುಮಾರಸ್ವಾಮಿ ಕಳೆದ ಕೆಲವು ದಿನಗಳಿಂದ ವೀಕ್ ಆಗಿ ಕಾಣಿಸುತ್ತಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗಲೂ ಅವರ ಧ್ವನಿ ತೀರಾ ಕುಗ್ಗಿ ಹೋಗಿತ್ತು. ಇದನ್ನು ಗಮನಿಸಿ ನೆಟ್ಟಿಗರು ಏನೇ ಆಗ್ಲಿ ನಿಮ್ಮ ಆರೋಗ್ಯ ನೋಡ್ಕೊಳ್ಳಿ ಕುಮಾರಣ್ಣ. ನಿಮ್ಮ ಅಗತ್ಯ ರಾಜ್ಯಕ್ಕಿದೆ. ಯಾಕೋ ಇತ್ತೀಚೆಗೆ ತೀರಾ ಅನಾರೋಗ್ಯದಲ್ಲಿರುವಂತೆ ಕಾಣುತ್ತಿದೆ. ನಿಮ್ಮ ಆರೋಗ್ಯ ನೋಡ್ಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ