ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, 50 ಕೋಟಿ ರೂ. ಹೇಳಿಕೆ ಕೊಟ್ಟಿದ್ದಾರೆ ಎಂದರೆ ಎಸ್ಐಟಿ ರಚನೆ ಮಾಡಿ ತನಿಖೆ ಮಾಡಲಿ. ಸಿಎಂ ಆಗಿದ್ದುಕೊಂಡು ಬಫೂನ್ ಗಳ ರೀತಿ ಹೇಳಿಕೆ ಕೊಡಬಾರದು ಎಂದು ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.
ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಗಳು ಹಾಗೂ ಹಲವಾರು ಮಂತ್ರಿಗಳು 50 ಕೋಟಿ ಆಫರ್ ಕೊಟ್ಟಿದ್ದಾರೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಅವರು ಈ ರಾಜ್ಯದ ಮುಖ್ಯಮಂತ್ರಿಗಳು. ಅವರ ಗಮನಕ್ಕೆ ಬಾರದೇ ಆ ರೀತಿ ಆಗಲು ಸಾಧ್ಯವಿಲ್ಲ. ಇದು ಯಾರೋ ಬಫೂನ್ ಗಳು ಕೊಡುವ ರೀತಿ ಹೇಳಿಕೆ ಆಗಬಾರದು.
50 ಜನರಿಗೆ 50 ಕೋಟಿ ಆಫರ್ ಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಸರ್ಕಾರ ಈಗಾಗಲೇ ಹಲವು ಎಸ್ಐಟಿ ರಚನೆ ಮಾಡಿದೆ. ಬಹುಶಃ ರಾಜ್ಯದ ಮಾತ್ರವಲ್ಲ, ದೇಶದ ಇತಿಹಾಸದಲ್ಲೇ ಈ ಮಟ್ಟಿಗೆ ಎಸ್ಐಟಿ ರಚನೆ ಮಾಡಿಲ್ಲ. ಹೀಗಾಗಿ ಇದಕ್ಕೂ ಒಂದು ಎಸ್ಐಟಿ ರಚನೆ ಮಾಡಿ ತನಿಖೆ ಮಾಡಲಿ. ಇಲ್ಲದೇ ಇದ್ದರೆ ಮುಖ್ಯಮಂತ್ರಿಗಳ ಮತ್ತು ಅವರ ಸಚಿವ ಸಂಪುಟದ ಹೇಳಿಕೆಗಳು ಜನರಿಗೆ ಒಂದು ಹಾಸ್ಯಾಸ್ಪದ ಎನಿಸಬಹುದು ಎಂದು ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.