ಆಲೂರಿನಲ್ಲಿ ಜೆಡಿಎಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಎಚ್ ಡಿ ರೇವಣ್ಣ, ಇನ್ನು ಮೂರು ವರ್ಷ ಕಾಯಿರಿ, ನನಗೆ ಕೊಟ್ಟಿದ್ದಕ್ಕೆಲ್ಲಾ ಬಡ್ಡಿ ಸಮೇತ ತೀರಿಸ್ತೀನಿ. ಇಲ್ಲ ಅಂದರೆ ನಾನು ದೇವೇಗೌಡರ ಮಗನೇ ಅಲ್ಲ ಎಂದು ಎಚ್ ಡಿ ರೇವಣ್ಣ ಕಾರ್ಯಕರ್ತರ ಮುಂದೆ ಶಪಥ ಮಾಡಿದ್ದಾರೆ.
ದೇವೇಗೌಡರು, ಕುಮಾರಣ್ಣ, ರೇವಣ್ಣ ಎಲ್ಲಾ ನಿಮ್ಮಂತಹ ಪುಣ್ಯವಂತರಿಂದ ಉಳಿದಿದ್ದಾರೆ. ಪಾಪ ಪ್ರಜ್ವಲ್ ಗೂ ಏನೂ ಗೊತ್ತಾಗಲ್ಲ. ನಮ್ಮ ದುಡ್ಡು ತಗೊಂಡು ಬೇರೆಲ್ಲೋ ಹಾಕಿದ್ದರು. ಅವರೆಲ್ಲಾ ನನ್ನ ಕೈಗೆ ಸಿಗದೇ ಎಲ್ಲಿಗೆ ಹೋಗ್ತಾರೆ. ಎಲ್ಲದಕ್ಕೂ ಮೂರು ವರ್ಷ ಕಾಯಿರಿ. ಆಮೇಲೆ ಎಲ್ಲದಕ್ಕೂ ಬಡ್ಡಿ ಸಮೇತ ತಿರಿಸ್ತೀನಿ ಎಂದಿದ್ದಾರೆ.