ಎಚ್ ಡಿ ರೇವಣ್ಣ ಎಸ್ಐಟಿ ಕಸ್ಟಡಿ ಅವಧಿ ಇಂದು ಅಂತ್ಯ

Krishnaveni K

ಬುಧವಾರ, 8 ಮೇ 2024 (09:08 IST)
ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅಪಹರಣ ಆರೋಪದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಎಚ್ ಡಿ ರೇವಣ್ಣ ಎಸ್ಐಟಿ ಕಸ್ಟಡಿ ಅವಧಿ ಇಂದು ಅಂತ್ಯವಾಗಲಿದೆ.

ಮೊನ್ನೆಯಷ್ಟೇ ಎಚ್ ಡಿ ರೇವಣ್ಣನನ್ನು ಅವರ ನಿವಾಸದಿಂದಲೇ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ನ್ಯಾಯಾಲಯ ಅವರನ್ನು ಮೂರು ದಿನಗಳ ಕಾಲ ಎಸ್ಐಟಿ ವಶಕ್ಕೊಪ್ಪಿಸಿತ್ತು. ಇಂದು ಅವರ ಕಸ್ಟಡಿ ಅವಧಿ ಮುಕ್ತಾಯವಾಗುತ್ತಿದೆ. ಹೀಗಾಗಿ ಅವರ ಪರ ವಕೀಲರು ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ.

ಆದರೆ ಸದ್ಯಕ್ಕೆ ಅವರು ಎಸ್ಐಟಿ ವಶದಲ್ಲಿರುವ ಕಾರಣ ಈಗ ಜಾಮೀನು ನೀಡಲು ಸಾಧ‍್ಯವಿಲ್ಲ ಎಂದು ಕೋರ್ಟ್ ಕಾರಣ ನೀಡಿದೆ. ಸದ್ಯಕ್ಕೆ ಇಂದಿನವರೆಗೆ ಎಸ್ಐಟಿ ವಿವರಣೆ ನೀಡಲಿ ಎಂಬ ಕಾರಣಕ್ಕೆ ಇಂದಿನವರೆಗೆ ಅವಧಿ ವಿಸ್ತರಿಸಲಾಗಿದೆ. ಹೀಗಾಗಿ ಇಂದಿನ ದಿನ ರೇವಣ್ಣಗೆ ನಿರ್ಣಾಯಕವಾಗಲಿದೆ.

ಇಂದು ಕೋರ್ಟ್ ರೇವಣ್ಣಗೆ ಜಾಮೀನು ಮಂಜೂರು ಮಾಡುತ್ತದಾ ಅಥವಾ ಮತ್ತೆ ಎಸ್ಐಟಿ ವಶಕ್ಕೊಪ್ಪಿಸುತ್ತದೆಯೇ ಎಂದು ಕಾದು ನೋಡಬೇಕಿದೆ.  ಇನ್ನೊಂದೆಡೆ ವಿಚಾರಣೆ ವೇಳೆ ಎಸ್ಐಟಿ ತಂಡ ಎಷ್ಟೇ ಪ್ರಶ್ನೆ ಮಾಡಿದರೂ ಈ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಎಂದು ಎಚ್ ಡಿ ರೇವಣ್ಣ ಹೇಳುತ್ತಲೇ ಬಂದಿದ್ದಾರೆ. ಹೀಗಾಗಿ ತನಿಖಾ ತಂಡಕ್ಕೆ ಕೇಸ್ ಮುಂದುವರಿಸಲು ಕಷ್ಟವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ