HDK ವಿರುದ್ಧ ಡಿಕೆಸಿ ಗುಡುಗು

ಮಂಗಳವಾರ, 19 ಏಪ್ರಿಲ್ 2022 (21:12 IST)
ಮಾಜಿ ಸಿಎಂ HDK ವಿರುದ್ದ ಸಂಸದ ಡಿಕೆ ಸುರೇಶ್ ಹರಿಹಾಯ್ದಿದ್ದಾರೆ. ರಾಮನಗರ ತಾಲ್ಲೂಕಿನ ತಾಳವಾಡಿ ಗ್ರಾಮದ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ ಸಂಸದ ಡಿಕೆ ಸುರೇಶ್, ಜಿಲ್ಲೆಗೆ ಕಾವೇರಿ ನೀರು ತರ್ತಿನಿ‌ ಅಂತಾ ಹೇಳ್ತಿದ್ದಾರೆ. ಜಿಲ್ಲೆ ಬಗ್ಗೆ ನಿಮಗೆ ಕಾಳಜಿ ಇದ್ದಿದ್ದೇ ಆದ್ರೆ, ಯಾವ ಶಾಶ್ವತ ನೀರಾವರಿ ಯೋಜನೆ ಮಾಡಿದ್ದೀರಾ ಬಿಡುಗಡೆ ಮಾಡಿ. ಇದೀಗ ಜನತಾ ಜಲಧಾರೆ ಮಾಡ್ತಿದ್ದೀರಿ ಸಂತೋಷ. ರಾಜ್ಯದ ಎಲ್ಲಾ ಕಡೆ ನೀರು ಸಂಗ್ರಹ ಮಾಡೋಕೆ ಹೊರಟಿದ್ದೀರಾ ನಿಮಗೆ ಅಭಿನಂದನೆಗಳು. ಆದ್ರೆ ಪ್ರತಿದಿನ ಸುಳ್ಳು ಹೇಳ್ಕೊಂಡು ಇರೋಕೆ ಆಗಲ್ಲ. ನೀವು ಹೇಳೋ ಸುಳ್ಳನ್ನು ಜನ ನಂಬೊದಿಲ್ಲ. ನಾನು ಮಾಡಿದ ಕೆಲಸಗಳನ್ನು‌ ತಾನು ಮಾಡಿದ್ದು ಅಂತಾ ಪೂಜೆ ಮಾಡೋಕೆ ಬರ್ತಿರಾ. ನಿಮ್ಮ ಪಕ್ಕದಲ್ಲೇ ಇರೋ ವೃಷಭಾವತಿ ಕೆರೆನಾ ನೀವು ಶುಚಿ ಮಾಡ್ಲಿಲ್ಲ ಎಂದು HDK ವಿರುದ್ದ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ