ಪತ್ನಿಯನ್ನು ಗರ್ಭಿಣಿ ಮಾಡಿ ಆಕೆಯ ತಂಗಿ ಮೇಲೆ ಇಂಥ ಕೆಲಸ ಮಾಡಿದ

ಶನಿವಾರ, 31 ಆಗಸ್ಟ್ 2019 (18:48 IST)
ಆ ಕುಟುಂಬದಲ್ಲಿ ಮೂವರು ಹೆಣ್ಣುಮಕ್ಕಳಿದ್ದರು. ಅದರಲ್ಲಿ ಒಬ್ಬಳನ್ನು ಪ್ರೀತಿಸಿ ಮದುವೆಯಾದ ಭೂಪನೊಬ್ಬ ತನ್ನ ಪತ್ನಿಗೆ ಗರ್ಭಿಣಿ ಮಾಡಿ ಆ ಬಳಿಕ ಪತ್ನಿಯ ತಂಗಿಯ ಮೇಲೆ ಕಣ್ಣು ಹಾಕಿದ್ದಾನೆ.

ಪತ್ನಿಯ ಸಹೋದರಿಯ ಮೇಲೆ ಕಣ್ಣು ಹಾಕಿ ಪ್ರೀತ್ಸೆ ಪ್ರಿತ್ಸೇ ಅಂತ ಬೆನ್ನು ಬಿದ್ದ ಭಾವನಿಂದಾಗಿ  ಯುವತಿಯೊಬ್ಬಳ ಜೀವ ದಾರುಣವಾಗಿ ಅಂತ್ಯಗೊಂಡಿದೆ.

ಭಾವನ ಕಾಟ ತಾಳದೇ ಯುವತಿ ಮೌನಿಕಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮೌನಿಕಾಳ ಅಕ್ಕ ಮಾಧವಿಯನ್ನು ಪ್ರೀತಿಸಿ ಸುಧಾಕರ್ ಎಂಬಾತ ಮದುವೆಯಾಗಿದ್ದನು. ಮಕ್ಕಳಾದ ಬಳಿಕ ಪತ್ನಿಯ ತಂಗಿಯ ಮೇಲೆ ಕಣ್ಣು ಹಾಕಿ ಪ್ರೀತಿ ಮಾಡು ಅಂತ ಒತ್ತಾಯ ಮಾಡುತ್ತಿದ್ದನಂತೆ.

ಭಾವ ಸುಧಾಕರ್ ನ ಕಾಟ ತಾಳಲಾರದೇ ಮೌನಿಕಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೀಗಂತ ಸುಧಾಕರನ ಪತ್ನಿ ಮಾಧವಿ ಹಾಗೂ ಆಕೆಯ ಸಹೋದರಿ ದೂರು ದಾಖಲು ಮಾಡಿದ್ದಾರೆ.
ಆಂಧ್ರಪ್ರದೇಶದಲ್ಲಿ ಈ ಘಟನೆ ನಡೆದಿದೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ