ಅವನು ರೈಲು ಹೋದ ಮೇಲೆ ಟಿಕೆಟ್ ತಗೊಂಡಿದ್ದ: ಯೋಗೇಶ್ವರ್ ಬಗ್ಗೆ ವಿ. ಸೋಮಣ್ಣ ಮಾತು
ಚನ್ನಪಟ್ಟಣ, ಶಿಗ್ಗಾವಿ ನಾವು ಗೆದ್ದಾಗಿದೆ. ಸಂಡೂರು ತೀವ್ರ ಸ್ಪರ್ಧೆ ಇದ್ದರೂ ನಾವೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ. ಇದು ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆ. ಆಡಳಿತ ನಡೆಸುವುದು ಬಿಟ್ಟು ಚುನಾವಣೆಯಲ್ಲಿ ಮುಳುಗಿದರು. ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಬಿಟ್ಟು ಹಗರಣಗಳಲ್ಲಿ ಮುಳುಗಿದರು ಎಂದು ಟೀಕಿಸಿದರು.
ವಕ್ಫ್ ವಿವಾದ: ಬುದ್ಧಿವಂತರು ಜಾಸ್ತಿ ಇರುವಲ್ಲಿ ವಿವಾದ ಇರ್ತದೆ. ಆದರೆ ವಕ್ಫ್ ವಿರುದ್ಧದ ಹೋರಾಟ ಧ್ವನಿ ಒಂದೇ ಆಗಿದೆ. ಉಪ ಚುನಾವಣೆ ಫಲಿತಾಂಶ ಬಂದ ಮೇಲೆ ಎಲ್ಲ ಬಣ ಒಂದಾಗುತ್ತವೆ ಎಂದು ಪ್ರತಿಕ್ರಿಯಿಸಿದರು.