ನಾಳೆಯಿಂದ ತುಮಕೂರಿನಲ್ಲಿ ನಿಲುಗಡೆಯಾಗಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್, ಸಚಿವ ವಿ ಸೋಮಣ್ಣ ಚಾಲನೆ
ವಂದೇ ಭಾರತ್ ರೈಲು ತುಮಕೂರಿನಲ್ಲಿ ನಾಳೆ ಸಂಜೆ 6.18ಕ್ಕೆ ರೈಲು ನಿಲುಗಡೆಯಾಗಲಿದೆ. ಆ ಬಳಿಕ ಆಗಸ್ಟ್ 24 ರಿಂದ ಧಾರವಾಡಕ್ಕೆ ತೆರಳುವಾಗ ಹಾಗೂ ಧಾರವಾಡದಿಂದ ಹಿಂದಿರುಗುವಾಗ ಬೆಳ್ಳಿಗ್ಗೆ ಹಾಗೂ ಸಂಜೆ ನಿಲುಗಡೆಯಾಗಲಿದೆ.
ಇನ್ನೂ ವಿ ಸೋಮಣ್ಣ ಅವರು ತುಮಕೂರಿಗೆ ಹಲವು ಯೋಜನೆಗಳನ್ನು ಕೈಗೊಂಡು ಈ ಬಾರಿಯ ಬಜೆಟ್‌ನಲ್ಲಿ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗಕ್ಕೆ 150 ಕೋಟಿ ರೂ., ತುಮಕೂರು-ರಾಯದುರ್ಗಕ್ಕೆ (ಕಲ್ಯಾಣದುರ್ಗ ಮಾರ್ಗ) 250 ಕೋಟಿ ರೂ. ಅನುದಾನ ನೀಡಿದ್ದರು.