ಮೈಸೂರು: ನಾನು ಸಿಎಂ ಆಗಿದ್ದಾಗ ಬಂಡೆಯಾಗಿ ನಿಲ್ಲುತ್ತೇನೆಂದು ಹೇಳಿದ್ದ ಡಿಕೆಶಿ ನನ್ನ ಮೇಲೆಯೇ ಬಂಡೆ ಹಾಕಿದ್ದರು. ಇದೀಗ ಸಿಎಂ ಸಿದ್ದರಾಮಯ್ಯಗೇ ಅದೇ ಭರವಸೆಯನ್ನು ನೀಡುತ್ತಿದ್ದು, ಅವರ ಕತೆ ಸಹ ಮುಗಿಯಿತು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ನಡೆದ ಬೆಂಗಳೂರು-ಮೈಸೂರು ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಗೆದ್ದಿದ್ದೇನೆಂದು ಹೇಳಿದ್ದಾರೆ. ನಾನು 19 ಸ್ಥಾನ ಅಷ್ಟೇ ಗೆಲ್ಲೋದಕ್ಕೆ ಸಾಧ್ಯವಾಗಿದ್ದು ಅಂತ ಹೇಳುತ್ತಿರುವ ಡಿಕೆಶಿ ಅವರು ಲೋಕಸಭೆ ಚುನಾವಣೆಯಲ್ಲಿ ಯಾಕೆ ಕಡಿಮೆ ಗೆದ್ದದ್ದು, ರಾಜಕೀಯದಲ್ಲಿ ಏಳುಬೀಳು ಇದ್ದಿದ್ದೆ ಎಂದು ಕಿಡಿಕಾರಿದರು.
ತನ್ನ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲ ಎನ್ನುವ ಸಿಎಂ ಸಿದ್ದರಾಮಯ್ಯ ಅವರು ತನ್ನ ಚಡ್ಡಿಯೆಲ್ಲ ಕಪ್ಪು ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ ಎಚ್‌ಡಿಕೆ, ನನ್ನ ಅಣ್ಣನ ಮಗನನ್ನು ನಾನು ಜೈಲಿಗೆ ಕಳುಹಿಸಿದ್ದೀನಿ ಅಂದಿದ್ದೀರಿ ಶಿವಕುಮಾರ್. ಮಿಸ್ಟರ್ ಶಿವಕುಮಾರ್, ನಾನು ಚಾಮುಂಡೇಶ್ವರಿ ಸನ್ನಿದಾನದಲ್ಲಿ ನಿಂತು ಮಾತಾಡ್ತಿದ್ದೇನೆ. ಕಾಫಿ ಡೇ ಸಿದ್ದಾರ್ಥ ಸಾವಿಗೆ ಕಾರಣ ಯಾರು ಅಂತಾ ಹೇಳ್ತೀರಾ ಎಂದು ಪ್ರಶ್ನೆ ಮಾಡಿದರು.