ಆ್ಯಂಬುಲೆನ್ಸ್, ಟೆಂಪೋ ನಡುವೆ ಮುಖಾಮಖಿ ಡಿಕ್ಕಿ

ಗುರುವಾರ, 16 ಫೆಬ್ರವರಿ 2023 (13:45 IST)
ಆ್ಯಂಬುಲೆನ್ಸ್, ಟೆಂಪೋ ನಡುವೆ ಮುಖಾಮಖಿ ಡಿಕ್ಕಿಯಾಗಿದ್ದು, ಟೆಂಪೋದಲ್ಲಿದ್ದ 8ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಹುಬ್ಬಳ್ಳಿಯ ದೇಶಪಾಂಡೆ ನಗರದ ಬಳಿ ಘಟನೆ ನಡೆದಿದೆ. ಯಲ್ಲಮ್ಮ ಗುಡ್ಡದಿಂದ ರಾಣೆಬೆನ್ನೂರಿಗೆ ಹೊರಟಿದ್ದ ಟೆಂಪೋ ಹಾಗೂ ಗದಗ್​ನಿಂದ ಕಿಮ್ಸ್​ಗೆ ಬರುತ್ತಿದ್ದ ಆ್ಯಂಬುಲೆನ್ಸ್​​ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ