ವಿದ್ಯಾರ್ಥಿಗಳನ್ನ ಪತ್ತೆ ಮಾಡಿ ಲಸಿಕೆ ನೀಡಲು ಆರೋಗ್ಯ ಇಲಾಖೆ ಸೂಚನೆ

ಬುಧವಾರ, 8 ಸೆಪ್ಟಂಬರ್ 2021 (19:16 IST)
ಲಸಿಕೆಯಿಂದ ದೂರ ಉಳಿದಿರುವ ವಿದ್ಯಾರ್ಥಿಗಳನ್ನು ಶೀಘ್ರ ಪತ್ತೆ ಮಾಡಿ ಲಸಿಕೆ ನೀಡುವಂತೆ ರಾಜ್ಯ ಆರೋಗ್ಯ ಇಲಾಖೆಯು ಕಾಲೇಜು ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿಗಳು ಅಥವಾ ಪೋಷಕರಿಗೆ ಕರೆ ಮಾಡಿ ಯಾಕೆ ಈವೆರೆಗೂ ಲಸಿಕೆ ಪಡೆದಿಲ್ಲ ಎಂಬ ಮಾಹಿತಿ ಪಡೆದುಕೊಳ್ಳಬೇಕು. ದಾಸ್ತಾನು ಕೊರತೆಯಿಂದ ಲಸಿಕೆ ಸಿಕ್ಕರದಿದ್ದರೆ, ಅಂತಹ ಮತ್ತಷ್ಟು ವಿದ್ಯಾರ್ಥಿಗಳನ್ನು ಪತ್ತೆ ಮಾಡಿ ಕಾಲೇಜಿನಲ್ಲಿ ಲಸಿಕಾ ಶಿಬಿರ ಆಯೋಜಿಸಿ ಲಸಿಕೆ ನೀಡಬೇಕು. ಇತರೆ ತಪ್ಪು ಕಲ್ಪನೆ ಇದ್ದರೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಡಳಿತದ ಮೂಲಕ ಕಾಲೇಜುಗಳಿಗೆ ಮಾಹಿತಿ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದರು.
 
 
ವಿದ್ಯಾರ್ಥಿಗಳು ಲಸಿಕೆಯಿಂದ ದೂರ ಉಳಿಯಲು ಕಾರಣಗಳಿವು:
*ದಾಸ್ತಾನು ಕೊರತೆ, ಸಕಾಲಯದಲ್ಲಿ ಲಸಿಕೆ ಸಿಗದಿರುವುದು.
*ಇತ್ತೀಚೆಗೆ ಸೋಂಕು ತಗುಲಿದ್ದು, ಮೂರು ತಿಂಗಳವರೆಗೂ ಲಸಿಕೆ ಸಾಧ್ಯವಾಗದಿರುವುದು.
*ಭೌತಿಕ ತರಗತಿಗಳಿಗೆ ಹಾಜರಾಗಲು ಇಷ್ಟವಿಲ್ಲದೆ ಲಸಿಕೆಯಿಂದ ದೂರ ಸಾಧ್ಯತೆ.
*ಲಸಿಕೆ ಕುರಿತು ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿರುವ ತಪ್ಪುಕಲ್ಪನೆಗಳು.
*ಕಾಲೇಜುಗಳಲ್ಲಿ ಪ್ರತ್ಯೇಕ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳದಿರುವುದು.
*ಲಸಿಕೆ ಪಡೆಯಲು ಕಾಲೇಜು ಪ್ರಾಶುಂಪಾಲರಿAದ ಕಡ್ಡಾಯ ಆದ್ಯತಾ ಪತ್ರ ತರಬೇಕೆಂಬ ನಿಮಯ.
 
ಲಸಿಕೆ ಪಡೆಯದ ಪದವಿ ಕಾಲೇಜು ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಕ್ಕೆ ಕಾಲೇಜುಗಳಿಗೆ ಸೂಚಿಸಲಾಗಿದೆ. ಶೀಘ್ರದಲ್ಲಿಯೇ ಎಲ್ಲಾ ವಿದ್ಯಾರ್ಥಿಗಳಿಗೂ ಲಸಿಕೆ ನೀಡಲಾಗುವುದು. ಎಲ್ಲೆಡೆ ಲಸಿಕೆ ಶಿಬಿರಗಳು ನಡೆಯುತ್ತಿದ್ದು, ಕಾಲೇಜು ಲಸಿಕಾ ಶಿಬಿರಕ್ಕೆ ಕಾಯದೇ ವಿದ್ಯಾರ್ಥಿಗಳು ನೇರವಾಗಿ ತೆರಳಿ ಲಸಿಕೆ ಪಡೆಯಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ