ಗಾಯಾಳುಗಳಿಗೆ ಸರ್ಕಾರದಿಂದ ಎಲ್ಲ ಸಹಕಾರ ನೀಡ್ತೇವೆ-ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಶನಿವಾರ, 12 ಆಗಸ್ಟ್ 2023 (16:04 IST)
ದುರ್ಘಟನೆ ನಿನ್ನೆ ಆಗಿತ್ತು.ಬಿಬಿಎಂಪಿ ಇಂಜಿನಿಯರ್ ಗಳು, ಕಂಪ್ಯೂಟರ್ ಆಪರೇಟರ್ಸ್ ಅಡ್ಮಿಟ್ ಆಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.೯ ಜನರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗಿದೆ.ಘಟನೆಯ ಬಗ್ಗೆ ಗಾಯಳುಗಳು ಮಾತನಾಡಿದ್ದಾರೆ.ಜೀವಕ್ಕೆ ತೊಂದರೆಯಿಲ್ಲ.ದೀರ್ಘಕಾಲದ ಚಿಕಿತ್ಸೆ ಬೇಕಾಗಬಹುದು.ಜೀವಕ್ಕೆ ಯಾರಿಗೂ ಅಪಾಯವಿಲ್ಲ. ಚೇತರಿಕೆ ಆಗ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
 
ಅಲ್ಲದೇ ಬಿಎಂಸಿ, ವಿಕ್ಟೊರಿಯಾ ಆಸ್ಪತ್ರೆಯವ್ರು ಒಳ್ಳೆಯ ರೀತಿಯಲ್ಲಿ ನೋಡಿಕೊಳ್ತಿದ್ದಾರೆ.ಸುರಕ್ಷತೆಗೆ ಏನಾದ್ರೂ ಇಟ್ಕೊಬಹುದಿತ್ತು.ಇಂತಹ ಘಟನೆಗಳು ಆಗುವ ಸಾಧ್ಯತೆಗಳು ಇದ್ರೂ, ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕಿತ್ತು.ಸುಮ್ನೆ ಗೊತ್ತಿಲ್ಲದೆ  ಮಾತನಾಡಲ್ಲ.  ತನಿಖೆಯಾಗ್ತಿದೆ.ಪ್ರಚಾರಕ್ಕೆ ವಸ್ತುವಾಗಿ ಮಾತನಾಡಲ್ಲ.ಪೊಲೀಸರಿಂದ ನಾನು ಲೈವ್ ಮಾಹಿತಿ ಏನ್  ಪಡೆಯುತ್ತಿಲ್ಲ.ಇದ್ರ ಬಗ್ಗೆ ಮುಂದಿನ ದಿನಗಳಲ್ಲಿ ಸುರಕ್ಷತೆಗೆ ಚಿಂತನೆ ಮಾಡಲಾಗುತ್ತೆ.ಎಲ್ಲರು ಚೆನ್ನಾಗಿದ್ದಾರೆ. ಒಳ್ಳೆಯ ಕೇರ್ ಸಿಗ್ತಿದೆ.ಎಲ್ಲರು ಗುಣಮುಖರಾಗ್ತಾರೆ.ಸರ್ಕಾರದಿಂದ ಎಲ್ಲ ಸಹಕಾರ ನೀಡ್ತೇವೆ.ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಮಾಡ್ತೇವೆ.ಗಾಯಾಳುಗಳನ್ನ ಶಿಫ್ಟ್ ಮಾಡಲು ಆಂಬ್ಯೂಲೆನ್ಸ್ ವಿಳಂಬ ವಿಚಾರಕ್ಕೆ ಕಡಿಮೆ ಸಮಯದಲ್ಲಿ ಸ್ಥಳ ತಲುಪಬೇಕು.ಆಂಬ್ಯೂಲೆನ್ಸ್ ನಲ್ಲೇ ಹೆಚ್ಚಿನ ವೈದ್ಯಕೀಯ ಸೇವೆಗಳು ಸಿಗುವಂತೆ ಆಗಬೇಕು.ತನಿಖೆಯ ಮೂಲಕ ನಿರ್ಲಕ್ಷ್ಯ ಗೊತ್ತಾಗುತ್ತೆ.ಮುಂದೆ ಸರಿಪಡಿಸುವಂತಹ ಕೆಲಸ ಆಗುತ್ತೆ ಅಂತಾ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
 
ಇನ್ನೂ KSMSIL ನಿಂದ ಸರಿಯಾದ ಸಮಯಕ್ಕೆ ಔಷಧಿ ಪೂರೈಕೆಯಾಗ್ತಿಲ್ಲ.ಆದಷ್ಟು ಶೀಘ್ರದಲ್ಲಿ ಟೆಂಡರ್ ಕರೆದು ಔಷಧಿಗಳನ್ನ ಮುಟ್ಟಿಸುವ ಕೆಲಸ ಮಾಡ್ತೇವೆ.ವ್ಯವಸ್ಥೆಯನ್ನು ಇಂಪ್ರೂವ್ ಮಾಡಲು ವ್ಯವಸ್ಥೆ ನಡೆಯುತ್ತಿದೆ.ಗುಣಮಟ್ಟ, ಕಡಿಮೆ ಔಷಧಿಗಳನ್ನು ತಲುಪಿಸುವ ವ್ಯವಸ್ಥೆ ಮಾಡ್ತೇವೆ.ವಿಕ್ಟೋರಿಯಾ ಆಸ್ಪತ್ರೆಯ ಅವ್ಯವಸ್ಥೆ ವಿಚಾರವಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಳ್ಳೆಯ ಸೇವೆ ಇದೆ.ವೈದ್ಯರಿಗೂ ಒತ್ತವಿದೆ.ನಮ್ಮ ಇಲಾಖೆಗೆ ವೈದ್ಯರ ಆದ್ಯತೆ ಹೆಚ್ಚಿದೆ ಎಂದು ಆರೋಗ್ಯ ಸಚಿವ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ