ಪ್ಯಾರಿಸ್ ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ ಗೇರಿದ ಆರ್ಚರಿ ತಾರೆ ದೀಪಿಕಾ ಕುಮಾರಿ, ಸಂಜೆ ಪಂದ್ಯದ ಡೀಟೈಲ್ಸ್

Krishnaveni K

ಶನಿವಾರ, 3 ಆಗಸ್ಟ್ 2024 (14:46 IST)
Photo Credit: Facebook
ಪ್ಯಾರಿಸ್: ನಾಲ್ಕನೇ ಒಲಿಂಪಿಕ್ಸ್ ಆಡುತ್ತಿರುವ ಭಾರತದ ಹಿರಿಯ ಆರ್ಚರಿ ಪಟು ದೀಪಿಕಾ ಕುಮಾರಿ ಇದೀಗ ನಡೆದ ಮಹಿಳೆಯರ ಸಿಂಗಲ್ಸ್ ಆರ್ಚರಿ ವಿಭಾಗದಲ್ಲಿ 16 ನೇ ಸುತ್ತಿನ ಪಂದ್ಯವನ್ನು ಗೆದ್ದು ಕ್ವಾರ್ಟರ್ ಫೈನಲ್ ಗೇರಿದ್ದಾರೆ. ಇಂದು ಸಂಜೆಯೇ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದ್ದು, ಡೀಟೈಲ್ಸ್ ಇಲ್ಲಿದೆ.

ಇಂದು ನಡೆದ ರೌಂಡ್ 16 ಪಂದ್ಯದಲ್ಲಿ ದೀಪಿಕಾ ಕುಮಾರಿ ಜರ್ಮನಿಯ ಮಿಚೆಲ್ ವಿರುದ್ಧ ಜಯ ಗಳಿಸಿ ಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಮೊದಲ ಸೆಟ್ ನ್ನೇ ತನ್ನದಾಗಿಸಿಕೊಂಡ ದೀಪಿಕಾ ಬಳಿಕ ಎರಡನೇ ಸುತ್ತಿನಲ್ಲಿ ಸಮಬಲ ಸಾಧಿಸಿದರು. ಮೂರನೇ ಸುತ್ತಿನಲ್ಲಿ ಕೇವಲ ಒಂದು ಅಂಕ ಲೀಡ್ ಪಡೆದು ಸೆಟ್ ತನ್ನದಾಗಿಸಿಕೊಂಡರೂ ನಾಲ್ಕನೇ ಸುತ್ತಿನಲ್ಲಿ ಎರಡು ಅಂಕಗಳಿಂದ ಕಳೆದುಕೊಂಡರು. ಆದರೆ ಐದನೇ ಸುತ್ತಿನಲ್ಲಿ ಅಂಕ ಸಮಬಲ ಸಾಧಿಸುವುದರೊಂದಿಗೆ ದೀಪಿಕಾ ಪಂದ್ಯ ತಮ್ಮದಾಗಿಸಿಕೊಂಡರು.

ಇಂದು ಸಂಜೆಯೇ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದ್ದು, ಸಂಜೆ 5.05 ಕ್ಕೆ ಪಂದ್ಯ ನಡೆಯಲಿದೆ. ದೀಪಿಕಾ ಬಳಿಕ ಮತ್ತೊಬ್ಬ ಭಾರತೀಯ ಆರ್ಚರಿ ಪಟು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಇಂದು ಪಂದ್ಯವಾಡಿದರು. ಚೊಚ್ಚಲ ಒಲಿಂಪಿಕ್ಸ್ ಆಡುತ್ತಿರುವ ಭಜನ್ ಕೌರ್ ಕೊನೆಯ ಹಂತದಲ್ಲಿ ಸೋತು ನಿರಾಸೆ ಅನುಭವಿಸಿದರು.

ಒಟ್ಟು ಐದು ಸುತ್ತಿನವರೆಗೆ ಪಂದ್ಯ ಕೊಂಡೊಯ್ದ ಭಜನ್ ಕೌರ್ ಸ್ಕೋರ್ ಸಮಬಲ ಸಾಧಿಸುವುದರೊಂದಗಿ ಪಂದ್ಯವನ್ನು ಶೂಟ್ ಔಟ್ ಗೆ ಕೊಂಡೊಯ್ದರು. ಆದರೆ ಶೂಟೌಟ್ ನಲ್ಲಿ ಎದುರಾಳಿ ಆಟಗಾರ್ತಿ ಚೊರುನ್ನಿಸಾ 9 ಅಂಕ ಹೊಡೆದರೆ ಎರಡನೆಯವಾಗಿ ಶೂಟ್ ಮಾಡಿದ ಭಜನ್ 8 ಅಂಕ ಪಡೆಯುವ ಮೂಲಕ ಸೋಲು ಅನುಭವಿಸಬೇಕಾಯಿತು. ಆದರೆ 18 ವರ್ಷದ ಭಜನ್ ಮೊದಲ ಒಲಿಂಪಿಕ್ಸ್ ನಲ್ಲೇ ಅದ್ಭುತ ಪ್ರದರ್ಶನ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ