ಕರಾವಳಿ ಜಿಲ್ಲೆಗಳಲ್ಲಿ ಉಷ್ಣ ಅಲೆ ಎಚ್ಚರಿಕೆ: ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು

Krishnaveni K

ಗುರುವಾರ, 27 ಫೆಬ್ರವರಿ 2025 (10:16 IST)
ಬೆಂಗಳೂರು: ಕರ್ನಾಟಕದಲ್ಲಿ ಈಗ ತಾಪಮಾನ ವಿಪರೀತ ಎನಿಸುವಷ್ಟು ಏರಿಕೆಯಾಗುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಉಷ್ಣ ಅಲೆ ಎಚ್ಚರಿಕೆ ನೀಡಲಾಗಿದೆ. ಉಷ್ಣ ಅಲೆ ವೇಳೆ ಯಾವ ಮುನ್ನೆಚ್ಚರಿಕೆ ಕೈಗೊಳ್ಳಬೆಕು ಇಲ್ಲಿದೆ ವಿವರ.

ಕರಾವಳಿ ಭಾಗದಲ್ಲಿ ತಾಪಮಾನ ಈಗ 40 ಡಿಗ್ರಿಯವರೆಗೆ ಏರಿಕೆಯಾಗಿದೆ. ತಾಪಮಾನ ಏರಿಕೆಯಿಂದ ಜನ ಹೊರಗಡೆ ಸುತ್ತಾಡುವುದು ಅಪಾಯಕಾರಿಯಾಗಿದೆ. ಜೊತೆಗೆ ತಾಪಮಾನದಿಂದಾಗಿ ಆರೋಗ್ಯ ತೊಂದರೆಗಳನ್ನು ಎದುರಿಸುವ ಸಾಧ್ಯತೆಯಿದೆ.

ಮುನ್ನೆಚ್ಚರಿಕೆ ವಹಿಸಿ
ವಿಶೇಷವಾಗಿ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯೊಳಗೆ ಹೊರಗಡೆ ಓಡಾಡುವುದನ್ನು ತಪ್ಪಿಸಿ.
ದಿನದಲ್ಲಿ ಸಾಕಷ್ಟು ನೀರು ಅಥವಾ ನೀರಿನಂಶವಿರುವ ಪಾನೀಯಗಳನ್ನು ಸೇವಿಸುತ್ತಿರಿ
ಹೊರಗಡೆ ಹೋಗಲೇಬೇಕೆಂದರೆ ಸನ್ ಲೋಷನ್ ಹಚ್ಚಿಕೊಳ್ಳಿ
ಗಾಳಿಯಾಡುವಂತಹ ಬಟ್ಟೆಗಳನ್ನು ಧರಿಸಿ ಓಡಾಡಿ
ದಿನಕ್ಕೆ ಎರಡು ಬಾರಿ ತಪ್ಪದೇ ಸ್ನಾನ ಮಾಡಿ
ಬಿಸಿಲಿಗೆ ನಿಲ್ಲಿಸಿರುವ ಕಾರಿನಲ್ಲಿ ಮಕ್ಕಳನ್ನು ಕೂರಿಸಲು ಹೋಗಬೇಡಿ
ಬಿಸಿಲಗೆ ಹೋಗುವಾಗ ಟೋಪಿ ಅಥವಾ ತಂಪು ಕನ್ನಡಕಗಳನ್ನು ಧರಿಸಿ
ಉಷ್ಣ ಆಹಾರಗಳನ್ನು ತೆಗೆದುಕೊಳ್ಳಬೇಡಿ.
ಮನೆಯಲ್ಲಿ ಆದಷ್ಟು ಕಿಟಿಕಿ ಬಾಗಿಲುಗಳನ್ನು ತೆರೆದು ಗಾಳಿಯಾಡುವಂತೆ ನೋಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ