ಮಧ್ಯರಾತ್ರಿ ಮಾರತ್ತಹಳ್ಳಿ ಬ್ರಿಡ್ಜ್ ಸಮೀಪ ಭಾರೀ ಅಗ್ನಿ ಅವಘಡ..!

ಮಂಗಳವಾರ, 19 ಡಿಸೆಂಬರ್ 2023 (14:20 IST)
ಮಧ್ಯರಾತ್ರಿ ಮಾರತ್ತಹಳ್ಳಿ ಬ್ರಿಡ್ಜ್ ಸಮೀಪ ಭಾರೀ ಅಗ್ನಿ ಅವಘಡ ಸಂಭವಿಸಿದ್ದು,ಮುಖ್ಯ ರಸ್ತೆವರೆಗೂ ಬೆಂಕಿ ಚಾಚಿಕೊಂಡಿದೆ.ಬೆಂಕಿಯ ಆರ್ಭಟ ಕಂಡು ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ.ಧಗ ಧಗನೇ ಮೂರಂತಸ್ತಿನ ಕಟ್ಟಡ ಹೊತ್ತಿ ಉರಿದಿದೆ.ಕಟ್ಟಡದ ಮುಂದೆ ಇದ್ದ ತೆಂಗಿನ ಮರಕ್ಕೂ ಬೆಂಕಿ ಅಂಟಿಕೊಂಡಿದೆ.ಅಂಗಡಿ ಪಕ್ಕದಲ್ಲಿದ್ದ ಟ್ರಾನ್ಸ್ ಫಾರ್ಮರ್ ಕೂಡ ಬೆಂಕಿಗಾಹುತಿಯಾಗಿದೆ.
 
ಬೆಂಕಿನ ಕೆನ್ನಾಲಿಗೆಗೆ ಮೂರಂತಸ್ತಿನ ಲೂಯಿಸ್ ಫಿಲಿಪ್ ಬಟ್ಟೆ ಶೋರೂಂ ಸುಟ್ಟು ಕರಕಲಾಗಿದೆ.ಪಕ್ಕದ ಕಟ್ಟಡದಲ್ಲಿದ್ದ ಮೂರ್ನಾಲ್ಕು ಅಂಗಡಿಗೂ ಬೆಂಕಿ ತಗುಲಿದೆ.ನಿನ್ನೆ ರಾತ್ರಿ 11.45 ರ ಸುಮಾರಿಗೆ ಘಟನೆ ನಡೆದಿದೆ.ಕ್ಷಣ ಮಾತ್ರದಲ್ಲಿ ಮೂರು ಕಟ್ಟಡಕ್ಕೆ ಬೆಂಕಿ  ಕಿಡಿ ಹೊತ್ತಿಕೊಂಡಿದ್ದು ಹೇಗೆ ಅನ್ನೋದೆ ನಿಗೂಢವಾಗಿದೆ.ಅಂಗಡಿ ಪಕ್ಕದಲ್ಲೇ ಇದ್ದ ಟ್ರಾನ್ಸ್ ಫಾರ್ಮರ್ ನಿಂದ ಬೆಂಕಿ ಹೊತ್ತಿಕೊಂಡಿರೊ ಸಂಶಯ ವ್ಯಕ್ತವಾಗಿದೆ.ಲೂಯಿಸ್ ಫಿಲಿಪ್ ಬಟ್ಟೆ ಅಂಗಡಿ ಬೋರ್ಡ್ ನಿಂದಲು ಬೆಂಕಿ ಅಂಟಿಕೊಂಡಿರೊ ಶಂಕೆ ಇದೆ.ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದೇ ರೋಚಕ.ಬೆಂಕಿ ಹೊತ್ತಿಕೊಂಡ ಕಟ್ಟಡದಲ್ಲಿದ್ದ ನಾಲ್ವರು
ಬೆಂಕಿ ಬೀಳ್ತಾ ಇದ್ದಂತೆ ಪಕ್ಕದ ಕಟ್ಟಡಕ್ಕೆ ಜಂಪ್ ಆಗಿದ್ದಾರೆ.ಓರ್ವನನ್ನ ಸುರಕ್ಷಿತವಾಗಿ ಅಗ್ನಿಶಾಮಕ ಸಿಬ್ಬಂದಿ ಹೊರತಂದಿದ್ದಾರೆ.
 
ಮಧ್ಯರಾತ್ರಿ ಐದಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ಸ್ಥಳಕ್ಕೆ ದೌಡಯಿಸಿದ್ದು,ಮೊದಲು ಪಕ್ಕದ ಕಟ್ಟಡಕ್ಕೆ ಹೊತ್ತಿಕೊಳ್ತಿದ್ದ ಬೆಂಕಿ ಆರಿಸಿದ್ದಾರೆ.ನಂತರ ಕಟ್ಟಡದ ಹೊರಗೆ ಉರಿಯುತ್ತಿದ್ದ ಬೆಂಕಿ ನಂದಿಸಿದ್ದಾರೆ.ಏಣಿ ಮೂಲಕ ಮೊದಲ ಮಹಡಿಗೆ ಸಿಬ್ಬಂದಿ ಎಂಟ್ರಿ ಕೊಟ್ಟಿದ್ದಾರೆ.ಹೊಗೆ ಮಧ್ಯೆ ಬಿಎ(ಬ್ರೀತಿಂಗ್ ಅಪರೇಟಸ್) ಧರಿಸಿ ಕಟ್ಟಡದೊಳಗೆ ಎಂಟ್ರಿಕೊಟ್ಟಿದ್ದು,ಉಸಿರಾಟ ಸಲಕರಣೆ ಧರಿಸಿ ಕಟ್ಟಡದ ತುದಿಯಲ್ಲಿ ಕೂತು  ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ.ಕಟ್ಟರ್ ನಿಂದ ಸಿಬ್ಬಂದಿ ಶೆಟರ್ ಓಪನ್  ಮಾಡಿದ್ದಾರೆ.

ಓಪನ್ ಮಾಡಿದ ಜಾಗದ ಮೂಲಕ ನೀರು ಹಾಯಿಸಿದ್ದಾರೆ.ಘಟನೆಯಲ್ಲಿ ಓರ್ವ ಅಗ್ನಿಶಾಮಕ ಸಿಬ್ಬಂದಿಗೆ ಗಾಯವಾಗಿದೆ.ಅಂಗಡಿ ಮುಂದೆ ನಿಂತು ಬೆಂಕಿ ಆರಿಸಲು ಸಿಬ್ಬಂದಿ ಮುಂದಾಗಿದಾಗ ಮೊದಲ ಮಹಡಿಯಿಂದ ಗ್ಲಾಸ್ ಒಡೆದು ಬಿದ್ದಿದೆ.ಕೈ ಬೆರಳಿಗೆ ಗಾಯವಾಗಿ ಪಕ್ಕದಲ್ಲೇ ಇದ್ದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.ಎರಡೂವರೆ ಗಂಟೆ ನಿರಂತರ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ ಬಂದಿದೆ.ಅಂಗಡಿಯಲ್ಲಿದ್ದ ಬಟ್ಟೆ ಸುಟ್ಟು ಕರಕಲಾಗಿದೆ.ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ