ಭಾರೀ ಮಳೆ; ಕೃತಕ ನೆರೆ ಸೃಷ್ಟಿ- ಕಂಗೆಟ್ಟ ಜನ

ಮಂಗಳವಾರ, 23 ಜುಲೈ 2019 (18:50 IST)
ಉಡುಪಿಯಲ್ಲಿ ಮಳೆ ಅಬ್ಬರ ಜೋರಾಗಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ತಡ ರಾತ್ರಿ ಸುರಿದ ಮಳೆಯಿಂದ ಉಡುಪಿ ನಗರದ ಬನ್ನಂಜೆ, ಮೂಡನಿಡಂಬರೂ, ಕಲ್ಸಂಕಬಗುಂಡಿಬೈಲು ಪ್ರದೇಶಗಳಲ್ಲಿ ನೀರು ತುಂಬಿ ಕೊಂಡಿದೆ.

ನಿಟ್ಟೂರು ಬನ್ನಂಜೆ ಹಾಗೂ ಗರೋಡಿ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು ಸಂಚಾರ ಸ್ಥಗಿತಗೊಂಡಿದೆ. ಕೆಲವೊಂದು ಮನೆಯೊಳಗಡೆಯೂ ನೀರು ತುಂಬಿಕೊಂಡಿದೆ.

ಇಂದ್ರಾಣಿ ನದಿಗೆ ನಗರ ಸಭೆ ಡ್ರೈನೇಜ್ ಪೈಪ್ ಅಳವಡಿಸಿರುವ ಹಿನ್ನಲೆಯಲ್ಲಿ ಕೃತಕ ನೆರೆ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಜಿಲ್ಲೆಯ ಕುಂದಾಪುರ, ಕಾರ್ಕಳದಲ್ಲೂ ಭಾರೀ ಮಳೆ ಸುರಿದಿದೆ. ಯಡಮೊಗ್ಗೆ ಬಳಿ ಸೇತುವೆ ನಿರ್ಮಾಣ ಹಿನ್ನಲೆಯಲ್ಲಿ ತಾತ್ಕಲಿಕವಾಗಿ ನದಿಗೆ ಹಾಕಲಾಗಿದ್ದ ಮಣ್ಣು ಕೊಚ್ಚಿ ಹೋಗಿದೆ. ಸಂಪರ್ಕ ಕೊಂಡಿ ತಪ್ಪಿ ಹೋಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಶಾಲಾ -ಕಾಲೇಜುಗಳಿಗೆ ರಜೆ ನೀಡಿದೆ.‌ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ