ಉತ್ತರ ಕರ್ನಾಟಕ, ಮಲೆನಾಡಿನಲ್ಲಿ ಭಾರೀ ಮಳೆ

ಗುರುವಾರ, 20 ಜುಲೈ 2017 (13:35 IST)
ಉತ್ತರ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಪುನರ್ವಸು ಮಳೆಯ ಅಬ್ಬರ ಜೋರಾಗಿದೆ. ಕೊಡಗಿನಾದ್ಯಂತ ಮಳೆ ಸುರಿಯುತ್ತಿದ್ದು, ಎಲ್ಲಿ ನೋಡಿದರೂ ನೀರೋ ನೀರು. ಭಾಗಮಂಡಲ-ಮಡಿಕೇರಿ, ಭಾಗಮಂಡಲ-ನಾಪೋಕ್ಲು ರಸ್ತೆ ಜಲಾವೃತವಾಗಿದ್ದು, ಸಂಪರ್ಕ ಸ್ಥಗಿತಗೊಂಡಿದೆ. ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಇತ್ತ, ಮಲೆನಾಡಿನ ವರನಾಡು, ಕಳಸಾ, ಮೂಡಿಗೆರೆ, ಕೊಪ್ಪ, ಶೃಗೇರಿ, ಎನ್.ರ್.ಪುರ ಸೇರಿದಂತೆ ಹಲವೆಡೆ ಅಪಾರ ಪ್ರಮಾಣದ ಮಳೆ ಸುರಿಯುತ್ತಿದೆ. ಕೆಲ ಸೇತುವೆಗಳೂ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.  ಇತ್ತ, ಧರ್ಮಸ್ಥಳ, ಸುಬ್ರಹ್ಮಣ್ಯ ಸುತ್ತಮುತ್ತ ಸಹ ಮಳೆ ಸುರಿಯುತ್ತಿದ್ದು, ಬೃಹದಾಕಾರದ ಮರಗಳು ರಸ್ತೆಗೆ ಬಿದ್ದು ರಸ್ತೆ ಸಂಚಾರದಲ್ಲೂ ವ್ಯತ್ಯಯವಾಗಿದೆ.

ಇನ್ನೂ ಮಹಾರಾಷ್ಟ್ರದಲ್ಲೂ ಮಳೆಯ ಆರ್ಭಟ ಜೋರಾಗಿದ್ದು, ಕೃಷ್ಣಾ ನದಿ ಭೋರ್ಗರೆಯುತ್ತಿದೆ. ರಾಜಾಪುರ ಡ್ಯಾಂನಿಂದ ನೀರು ಹೊರಬಿಟ್ಟ ಪರಿಣಾಮ ಚಿ ಚಿಕ್ಕೋಡಿ ತಾಲೂಕಿನ 4 ರಸ್ತೆಗಳು ಜಲಾವೃತವಾಗಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ