ಪರೀಕ್ಷೆಯಲ್ಲಿ ಭಾರೀ ಕಟ್ಟೆಚ್ಚರ!

ಸೋಮವಾರ, 6 ಜೂನ್ 2022 (07:05 IST)
ಬೆಂಗಳೂರು : ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಜೂ.16ರಿಂದ 18ರವರೆಗೆ ನಡೆಸುವ ಸಿಇಟಿ ಪರೀಕ್ಷೆಗೂ ಹಿಜಾಬ್ ಸೇರಿದಂತೆ ಕಿವಿ ಮತ್ತು ತಲೆ ಮುಚ್ಚುವಂತಹ ಯಾವುದೇ ವಸ್ತ್ರಗಳನ್ನು ಧರಿಸಿ ಬರುವಂತಿಲ್ಲ.
 
ನೀಟ್ ಪರೀಕ್ಷೆಗೆ ಇರುವ ಮಾರ್ಗಸೂಚಿಗಳನ್ನೇ ಅನುಸರಿಸಿ ಸಿಇಟಿ ಪರೀಕ್ಷೆ ನಡೆಸಲು ಮುಂದಾಗಿರುವ ಕೆಇಎ ಈ ಸಂಬಂಧ ಈಗಾಗಲೇ ವಿದ್ಯಾರ್ಥಿಗಳ ಪ್ರವೇಶ ಪತ್ರದಲ್ಲೇ ಪರೀಕ್ಷಾ ಕೇಂದ್ರಗಳಿಗೆ ಯಾವ ರೀತೀಯ ಉಡುಪು, ವಸ್ತುಗಳನ್ನು ನಿಷೇಧಿಸಲಾಗಿದೆ ಎಂಬ ಮಾಹಿತಿ ನೀಡಿದೆ.

ಅದರಂತೆ ವಸ್ತ್ರಸಂಹಿತೆಯ ವಿಚಾರದಲ್ಲಿ ಟೋಪಿ ಸೇರಿದಂತೆ ತಲೆ ಮತ್ತು ಕಿವಿಯನ್ನು ಮುಚ್ಚುವಂತಹ ಉಡುಪು ಧರಿಸುವಂತಿಲ್ಲ ಎಂದು ತಿಳಿಸಲಾಗಿದೆ. ಹಿಜಾಬ್ ಕೂಡ ಇದೇ ವರ್ಗದಲ್ಲಿ ಬರುವುದರಿಂದ ಅದನ್ನು ಧರಿಸಿ ಬರುವಂತಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ರಮ್ಯಾ ಅವರು, ‘ಪರೀಕ್ಷಾ ಅಕ್ರಮಗಳಿಗೆ ಅವಕಾಶವಾಗದಂತೆ ತಡೆಯಲು ಹಲವು ಮಾರ್ಗಸೂಚಿಗಳನ್ನು ನೀಡಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ