ದೋಸ್ತಿ ಸರ್ಕಾರದ ಬಜೆಟ್ ನಲ್ಲಿ ಕೃಷಿಕರಿಗೆ ನೆರವು

ಶುಕ್ರವಾರ, 8 ಫೆಬ್ರವರಿ 2019 (14:06 IST)
ಬೆಂಗಳೂರು : ಕಾಂಗ್ರೆಸ್ ಜೆಡಿಎಸ್ ದೋಸ್ತಿ ಸರ್ಕಾರದ ಬಜೆಟ್ ನಲ್ಲಿ ಸಿಎಂ ಕುಮಾರಸ್ವಾಮಿ ಕೃಷಿಕರಿಗೆ ಹಲವು ನೆರವು ಘೋಷಣೆ ಮಾಡಿದ್ದಾರೆ.


ಸಾವಯವ ಕೃಷಿ ಪದ್ದತಿಗೆ ಉತ್ತೇಜನ ನೀಡಲಾಗುವುದು . ಕೃಷ್ಣಾ ಮೇಲ್ದಂಡೆ ಯೋಜನೆಗೆ 1050 ಕೋಟಿ ರೂ. ಟೆಂಡರ್, ಭದ್ರಾ ಮೇಲ್ದಂಡೆ ಯೋಜನೆಗಳು ಚುರುಕುಗೊಂಡಿವೆ. `ಮುಖ್ಯಮಂತ್ರಿ ನವಬೆಂಗಳೂರು ಯೋಜನೆಗೆ 8 ಸಾವಿರ ಕೋಟಿ ರೂ. ಅನುದಾನ ಹಾಗೂ  ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಲು ನೆರವು ನೀಡುವ ಯೋಜನೆ ಮುಂದುವರಿಕೆಗೆ  250 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದಾರೆ.


ಹಾಗೇ ಮಲೆನಾಡು, ಕರಾವಳಿಯಲ್ಲಿ ಭತ್ತದ ಉದ್ಪಾದನೆ ಹೆಚ್ಚಿಸಲು ಕರಾವಳಿ ಪ್ಯಾಕೇಜ್ ಯೊಜನೆ ಹೆಕ್ಟೇರ್ ಗೆ 7 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ತಿಳಿಸಿದ್ದಾರೆ.


ಮಳೆಯ ಅಭಾವದಿಂದ ಕೃಷಿ ಬೆಳವಣಿಗೆ ಶೇ.4.8ರ ಕುಸಿತವಾಗುವ ಸಾಧ್ಯತೆ ಹಿನ್ನಲೆಯಲ್ಲಿ ಸಿರಿ ಧಾನ್ಯಗಳ ಬೆಳೆಯುವ ರೈತರ ಖಾತೆಗೆ 10 ಸಾವಿರ ರೂ. ಹಣ ಜಮೆ ಮಾಡಲಾಗುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ