ಪತಿ ಬೇರೆ ಮಹಿಳೆಯರ ಜೊತೆ ಚೆಲ್ಲಾಟವಾಡುತ್ತಾನೆ. ಏನು ಮಾಡಲಿ
ಭಾನುವಾರ, 31 ಮಾರ್ಚ್ 2019 (10:55 IST)
ಬೆಂಗಳೂರು : ಪ್ರಶ್ನೆ : ನನಗೆ ಮದುವೆಯಾಗಿ 9 ತಿಂಗಳು ಆಗಿದೆ. ನನ್ನ ಪತಿ ಬೇರೆ ಮಹಿಳೆಯರ ಜೊತೆ ಚೆಲ್ಲಾಟವಾಡುತ್ತಾನೆ. ಇದು ನನಗೆ ತುಂಬಾ ಕಿರಿಕಿರಿಯನ್ನುಂಟುಮಾಡುತ್ತದೆ. ಇದು ತಪ್ಪು ಎಂದು ನಾನು ಆತನಿಗೆ ಹೇಳಿದರೂ ಕೂಡ ಆತ ತಾನು ಮಾಡಿದ್ದೇ ಸರಿ ಎಂದು ವಾದಿಸುತ್ತಿದ್ದಾನೆ. ಇದನ್ನು ನಾನು ಹೇಗೆ ಸರಿಪಡಿಸಲಿ. ದಯವಿಟ್ಟು ತಿಳಿಸಿ.
ಉತ್ತರ : ಈ ಪರಿಸ್ಥಿತಿಯನ್ನು ನಿಬಾಯಿಸುವುದು ತುಂಬಾ ಕಷ್ಟ. ಆದರೆ ನಿಮ್ಮ ಪತಿ ಈ ನಡವಳಿಕೆಯನ್ನು ನಿಲ್ಲಿಸಬೇಕೆಂದರೆ ಆತನ ನಡವಳಿಕೆಯ ಬಗ್ಗೆ ಬೇರೆಯವರು ಹೇಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ತೋರಿಸಿ. ಇಲ್ಲಿ ನಿಮ್ಮ ಪ್ರತಿಕ್ರಿಯೆ ಬಗ್ಗೆ ನೀವು ಹೇಳಬೇಡಿ. ಯಾಕೆಂದರೆ ನೀವು ಆತನನ್ನು ನಿರ್ಬಂಧಿಸಲು ಈ ರೀತಿ ಹೇಳುತ್ತಿದ್ದಾಳೆ ಎಂದು ಭಾವಿಸುತ್ತಾರೆ.
ಅದಕ್ಕೂ ಮೀರಿ ಅವರು ಅವರು ತಮ್ಮ ನಡವಳಿಕೆಯನ್ನು ಬದಲಿಸಲಿಲ್ಲವೆಂದಾದರೆ ಆತ ಚೆಲ್ಲಾಟವಾಡುವ ಮಹಿಳೆಯರು ಆತನ ನಡವಳಿಕೆಯನನ್ನು ಇಷ್ಟಪಡುವುದಿಲ್ಲ, ಎಂದು ಸಾಕ್ಷ್ಯ ಸಮೇತವಾಗಿ ತೋರಿಸಿ. ಹಾಗೇ ಆತನ ಜೊತೆ ಹೇಗಾದರೂ ಒಮ್ಮೆ ಮಾತುಕತೆ ನಡೆಸಿ ಆರೋಗ್ಯಕರವಾಗಿ ಫ್ಲರ್ಟಿಂಗ್ ಮಾಡುವುದು ಏನೆಂದು ತೋರಿಸಿ. ಅದನ್ನು ಆತ ಒಪ್ಪಿಕೊಳ್ಳವಂತೆ ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.