ಸಂತಾನ ಉತ್ಪತ್ತಿಯಲ್ಲಿ ಪುರುಷ ಅಯೋಗ್ಯನೇ?

ಬುಧವಾರ, 27 ಮಾರ್ಚ್ 2019 (20:38 IST)
ಪ್ರಶ್ನೆ: ಸರ್, ನಾನು ಮದುವೆಯಾಗಿ ಐದು ವರ್ಷಗಳಾಗುತ್ತ ಬಂದಿವೆ. ನನ್ನ ಸಮಸ್ಯೆ ಏನೆಂದರೆ ಇದುವರೆಗೂ ನಮಗೆ ಮಕ್ಕಳಾಗಿಲ್ಲ. ಈ ಕೊರಗು ನಮ್ಮ ಕುಟುಂಬದವರನ್ನೆಲ್ಲ ಕಾಡುತ್ತಿದೆ. ಆಕೆಯಲ್ಲೂ ಯಾವ ದೋಷವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ನನಗೆ ವೈದ್ಯರ ಹತ್ತಿರ ಹೋಗೋಕೆ ಭಯವಾಗ್ತಿದೆ. ಹಾಗಿದ್ರೆ ಸಂತಾನ ಉತ್ಪತ್ತಿಯಲ್ಲಿ ಪುರುಷ ಅಯೋಗ್ಯನಾಗಿರುತ್ತಾನಾ? ಏನೊಂದು ತಿಳಿಯದಾಗಿದೆ.

ಉತ್ತರ: ಮದುವೆಯಾದ ಮೇಲೆ ಸಹಜವಾಗಿ ನವಜೋಡಿಗಳ ಮೇಲೆ ಎಲ್ಲರ ಕಣ್ಣು ಒಂದೆರೆಡು ವರ್ಷ ಇರುತ್ತದೆ.
ಮಕ್ಕಳಾಗಿಲ್ಲವಾ? ಯಾವಾಗ ಸ್ಪೇಷಲ್ ಎಂದು ಹೆಣ್ಣು, ಗಂಡಿಗೆ ಅವರ ಸ್ನೇಹಿತರು, ಕುಟುಂಬದವರು ಕೇಳೋದು ಕಾಮನ್, ಆದರೆ ಕೆಲವೇ ವರ್ಷಕ್ಕೆ ನಿಮಗೆ ಮಕ್ಕಳೇ ಆಗೋದಿಲ್ಲ ಎಂಬ ಭ್ರಮೆಯನ್ನು ಮೊದಲು ಬಿಡಿ. ಏಕೆಂದರೆ ಕೆಲವರಿಗೆ ಹತ್ತು, ಇಪ್ಪುತ್ತು ವರ್ಷಕ್ಕೆ ಮಕ್ಕಳಾಗಿರುವ ಉದಾಹರಣೆಗಳು ಸಾಕಷ್ಟಿವೆ. ನಿಮ್ಮ ಪತ್ನಿಯಲ್ಲಿ ಏನೂ ದೋಷವಿಲ್ಲ ಎಂದು ಹೇಳಿದ್ದೀರಿ. ಹಾಗೆ ನೀವು ಹಿಂಜರಿಕೆಯಿಲ್ಲದೇ ಸೂಕ್ತ ವೈದ್ಯರನ್ನು ಕಂಡು ಅಗತ್ಯವಿದ್ದರೆ ಚಿಕಿತ್ಸೆ ಪಡೆದಕೊಳ್ಳಿ. ತಾಂತ್ರಿಕತೆ ಈಗ ಹೆಚ್ಚಾಗಿ ಬೆಳೆದಿದೆ.
ನಿಮ್ಮಷ್ಟಕ್ಕೆ ನೀವು ಅಯೋಗ್ಯರು ಅಂತ ತೀರ್ಮಾನ ಮಾಡಿಕೊಳ್ಳಬೇಡಿ. ಜೀವನ ಇನ್ನೂ ಬಹಳಷ್ಟಿದೆ. ವೈದ್ಯರನ್ನು ಶೀಘ್ರ ಭೇಟಿ ಮಾಡಿ ಅವರ ಸೂಚನೆಯಂತೆ ನಡೆಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ