ಸೋಮವಾರ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಜಾಬ್ ಗಿಲ್ಲ ಅವಕಾಶ

ಶನಿವಾರ, 26 ಮಾರ್ಚ್ 2022 (19:48 IST)
ಎಸ್ಎಸ್ಎಲ್‌ಸಿ ಪರೀಕ್ಷೆಗೆ ಕೌಂಟ್‌ಡೌನ್ ಶುರುವಾಗಿದೆ.ಹಿಜಾಬ್ ವಿವಾದದ ನಡುವೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿಕೊಂಡಿದೆ .ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಶಿಕ್ಷಣ ಇಲಾಖೆ ಖಡಕ್ಕಾಗಿ ಆದೇಶ ಮಾಡಿದೆ. ಈ ಆದೇಶ ಮುಸ್ಲಿಂ ವಿದ್ಯಾರ್ಥಿನಿಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಈ ಬಾರಿ ನಡೆಯುವ ಪರೀಕ್ಷೆಯ ಕಡೆ ಎಲ್ಲಾರ ಚಿತ್ತವಲಿದೆ.
 ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಮಹತ್ವವಾದ ಘಟ್ಟ. ಎಸ್ ಎಸ್ ಎಲ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹಗಲು-ರಾತ್ರಿ ಎನ್ನದೇ ಪರಿಶ್ರಮ ಪಟ್ಟಿರುತ್ತಾರೆ. ಇನ್ನು ಟಾಫ್ ಬರಬೇಕೆಂದು ಸಾಕಷ್ಟು ಆಸೆ, ಕನಸು ಕಂಡಿರುತ್ತಾರೆ. ಆದ್ರೆ ಈಗ ಹಿಜಾಬ್ ಯಿಂದ ಇನ್ನಿಲ್ಲದ ಸಂಕಷ್ಟಕ್ಕೆ ವಿದ್ಯಾರ್ಥಿಗಳು ಸಿಲುಕಿದ್ದಾರೆ.ಮುಸ್ಲಿಂ ಸಮುದಾಯುದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ಆದೇಶ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿಂದೆ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಇಲ್ಲದೇ ಪ್ರೀಪ್ರೆಟರಿ ಎಕ್ಸಾಂಗೆ ಹಾಜರಾಗಿದಿಲ್ಲ. ಆದ್ರೆ ಈಗ ಮುಖ್ಯ ಪರೀಕ್ಷೆ  ಈ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗ್ತಾರೋ? ಇಲ್ವೋ? ಸರ್ಕಾರದ ಆದೇಶದಿಂದ ತಮ್ಮ ಭವಿಷ್ಯವನ್ನ ಎಲ್ಲಿ ಹಾಳುಮಾಡಿಕೊಳ್ತಾರೋ ಹೇಗೋ. ಆದ್ರೆ ಕೆಲ ಅನಕ್ಷರಸ್ಥ ಪೋಷಕರು ಹಿಜಾಬ್ ಧರಿಸಿಯೇ ಎಕ್ಸಾಂ ಬರಿಬೇಕು, ಇಲ್ಲಂದ್ರೆ ಎಕ್ಸಾಂ ಬರೆಯಲು ಹೋಗಬೇಡಿ ಎಂದು ಹೇಳ್ತಾರೆ. ಅದು ಕೂಡ ಮಕ್ಕಳ ಮೇಲೆ ಪರಿಣಾಮ ಬೀರುತ್ತೆ. ಆದ್ರೆ ಕೆಲ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಎಕ್ಸಾಂ ಬರೆಯುವಾಗ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ಬಿಚ್ಚಿಟು ಪರೀಕ್ಷೆ ಬರೆಯುತ್ತೇವೆ ಎಂದು ಹೇಳ್ತಾರೆ.ಸೋಮವಾರ ದಿಂದ ಆರಂಭವಾಗುವ ಎಸ್ ಎಸ್ ಎಲ್ ಸಿ  ಪರೀಕ್ಷೆ ಏಪ್ರಿಲ್ 11 ರಂದು ಅಂತ್ಯಗೊಳ್ಳಲಿದೆ. ಪರೀಕ್ಷೆ ವೇಳೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡದಿರಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಹೈಕೋರ್ಟ್ ನೀಡಿರುವ ಆದೇಶವನ್ನು ಚಾಚುತಪ್ಪದೇ ಜಾರಿಗೆ ತರಲು  ತೀರ್ಮಾನಿಸಿದೆ. ಹಾಗೇ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ನಿಗಪಡಿಸಿರುವ ಶಾಲಾ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ.ಖಾಸಗಿ ಶಾಲೆಗಳಲ್ಲಿಯೂ ಆಯಾ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರ ಕಡ್ಡಾಯ ಮಾಡಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ. ಇನ್ನು ಕೋವಿಡ್ ಬಂದಿರುವ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಸೋಂಕಿತರಿಗಾಗಿಯೇ  ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಸಲಾಗುತ್ತೆ. ಹಾಗೇ ಈ ಬಾರಿ ಕೋವಿಡ್ ಭೀತಿ ಇಲ್ಲದ ಕಾರಣ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಪತ್ರಿಕೆ ಇರುವುದಿಲ್ಲ. 2020ರ ಹಿಂದಿನ ರೀತಿಯಲ್ಲಿಯೇ ಪ್ರಶ್ನೆಪತ್ರಿಕೆ ಇರಲಿದೆ. ಬೆಳಗ್ಗೆ 10.30 ಯಿಂದ 1.45 ರವರೆಗೆ ಪರೀಕ್ಷೆ ನಡೆಯಲಿದೆ.ಇನ್ನು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.
 ಎಸ್ಎಸ್ಎಲ್‌ಸಿ ಪರೀಕ್ಷೆ
 
ಬಾಲಕರು                             4,52,765 
ಬಾಲಕಿಯರು                          4.21,110 
ವಿಭಿನ್ನ ಸಾಮರ್ಥ್ಯ ಮಕ್ಕಳು              5,307
ತೃತೀಯ ಲಿಂಗಿ                                  04
ಒಟ್ಟು ವಿದ್ಯಾರ್ಥಿಗಳು                8,73, 846
ಪರೀಕ್ಷಾ ಕೇಂದ್ರಗಳು                      3,444 

ಈ ಬಾರಿ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆ ಬಾರಿ ಕೌತುಕ ಉಂಟುಮಾಡಿದೆ. ಹಿಜಾಬ್ ವಿವಾದ ನಡುವೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರಾ? ಹೇಗೆ ? ಅವರ ಭವಿಷ್ಯಕ್ಕೆ ಅವರೇ ಕೊಳಿಹಿಟ್ಟಕೊಳ್ತಾರೋ? ಎಂಬ ಹತ್ತಾರು ಪ್ರಶ್ನೆ ಕಾಡ್ತಿದೆ. ಈ ಪ್ರಶ್ನೆಗಳಿಗೆ ವಿದ್ಯಾರ್ಥಿಗಳೇ ಉತ್ತರ ಕೊಡಬೇಕು. ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಮೂಲಕ ವಿದ್ಯಾರ್ಥಿಗಳು ಯಶಸ್ವಿಯಾಗಿ ಪರೀಕ್ಷೆ ಬರೆಯುತ್ತಾರಾ? ಹೇಗೆ ಎಂಬುದನ್ನ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ