ಕರಾವಳಿಯಲ್ಲಿ ಹಿಂದೂ ಟಾಸ್ಕ್ ಫೋರ್ಸ್ ಆರಂಭ?

ಸೋಮವಾರ, 25 ಜೂನ್ 2018 (17:16 IST)
ಕಡಲು ತೀರದ ಪ್ರದೇಶದಲ್ಲಿ ಸದ್ದಿಲ್ಲದೇ ಹಿಂದೂ ಟಾಸ್ಕ್ ಫೋರ್ಸ್ ಆರಂಭಗೊಳ್ಳುತ್ತಿದೆಯೇ ಎನ್ನುವ ಅನುಮಾನ ಜನರನ್ನು ಕಾಡಲಾರಂಭಿಸಿದೆ.

ಫೈರ್ ಬ್ರಾಂಡ್ ಖ್ಯಾತಿಯ ಸ್ವಾಮೀಜಿಯೊಬ್ಬರ ನೇತೃತ್ವದಲ್ಲಿ ಟಾಸ್ಕ ಫೋರ್ಸ್ ಅಸ್ತಿತ್ವಕ್ಕೆ ಬರಲಿದೆ ಎಂಬ ಸುದ್ದಿ ಬಲವಾಗಿ ಹರಡುತ್ತಿದೆ. ಲವ್ ಜಿಹಾದ್ ಮತ್ತು ಮತಾಂತರ ತಡೆಗಟ್ಟಲು ಹಿಂದೂ ಟಾಸ್ಕ್ ಫೋರ್ಸ್ ಆರಂಭಗೊಳ್ಳಲಿದೆ ಎನ್ನಲಾಗಿದ್ದು, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಇದರ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಹಿಂದುತ್ವವನ್ನು ಯಾರು ಗೌರವಿಸುತ್ತಾರೆಯೋ ಅವರನ್ನು ನಾವು ಗೌರವಿಸುತ್ತೇವೆ ಎನ್ನುವ ಧ್ಯೇಯದೊಂದಿಗೆ ಅಸ್ತಿತ್ವಕ್ಕೆ ಬರಲಿದೆ. ಈ ಕುರಿತು ಅಧಿಕೃತ ಅಂತರ್ಜಾಲ ತಾಣದ ಮೂಲಕ ಟಾಸ್ಕ ಫೋರ್ಸ್ ಮಾಹಿತಿಯನ್ನು ಹರಿಬಿಟ್ಟಿದೆ. ಹಿಂದುತ್ವದ ಅವಹೇಳನದ ವಿರುದ್ಧ ಹೋರಾಟ, ಧರ್ಮ ಜಾಗೃತಿ ಕಾರ್ಯದ ಬಗ್ಗೆ ಮಾಹಿತಿ ನೀಡುವ ಕೆಲಸವನ್ನೂ ಮಾಡಲಿದೆ.

ಈ ಟಾಸ್ಕ ಫೋರ್ಸ್ ದೇಶದ 29 ರಾಜ್ಯಗಳಲ್ಲಿಯೂ ಕ್ರಮೇಣ ವಿಸ್ತರಣೆ ಆಗಲಿದೆ. ಅಂದಹಾಗೆ ತ್ರಿಶೂಲ ಚಿನ್ಹೆಯೊಂದಿಗೆ ಫೀಲ್ಡಿಗೆ ಇಳಿಯಲು ಹಿಂದೂ ಟಾಸ್ಕ್ ಫೋರ್ಸ್ ಸಜ್ಜಾಗಿದ್ದು, ಈ ಕುರಿತು ಮಂಗಳೂರಿನ ವಜ್ರದೇಹಿ ಮಠದಲ್ಲಿ ಕಾನೂನು ತಜ್ಞರ ಸಮ್ಮುಖದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ