ಹೌದು ಮೋದಿ ಜೊತೆ ಮಾತನಾಡಿದ್ದೆ, ವೆರಿಗುಡ್ ಅಂದ್ರು, ಆದ್ರೆ ಬಿಜೆಪಿಗೆ ಮಾತ್ರ ಹೋಗಲ್ಲ: ಡಿಕೆ ಶಿವಕುಮಾರ್
ಮೆಟ್ರೋ ಯೆಲ್ಲೊ ಲೈನ್ ಉದ್ಘಾಟನೆಗೆ ಪ್ರಧಾನಿ ಮೋದಿ ಬಂದಿದ್ದಾಗ ಡಿಕೆ ಶಿವಕುಮಾರ್ ಒಬ್ಬರೇ ಮೋದಿ ಜೊತೆ ಮಾತನಾಡುತ್ತಿದ್ದುದು ಎಲ್ಲರ ಗಮನಕ್ಕೆ ಬಂದಿತ್ತು. ಈ ಬಗ್ಗೆ ವಿವರಣೆ ನೀಡಿದ್ದ ಡಿಕೆಶಿ ಬೆಂಗಳೂರು ಅಭಿವೃದ್ಧಿ ಬಗ್ಗೆ ಒಂದು ಪಟ್ಟಿ ಕೊಟ್ಟಿದ್ದೆ. ನಾವು ಕೈಗೊಂಡ ಯೋಜನೆಗಳ ಬಗ್ಗೆ ವಿವರಣೆ ನೀಡಿದ್ದೆ. ಇದಕ್ಕೆ ಮೋದಿಯವರು ವೆರಿಗುಡ್ ಡಿಕೆ ಎಂದರು ಎಂದಿದ್ದಾರೆ.
ಇನ್ನು, ಡಿಕೆಶಿ-ಮೋದಿ ಆಪ್ತ ಮಾತುಕತೆ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನ ಸಿಗದೇ ಇದ್ದರೆ ಡಿಕೆ ಶಿವಕುಮಾರ್ ಬಿಜೆಪಿಗೆ ಹೋಗಬಹುದೇ ಎಂಬ ಪ್ರಶ್ನೆ ಎದ್ದಿತ್ತು.
ಇದೆಲ್ಲದಕ್ಕೂ ಡಿಕೆಶಿ ಈಗ ಉತ್ತರ ನೀಡಿದ್ದಾರೆ. ದೇಶದಲ್ಲೇ ನಾನೊಬ್ಬ ಹಿರಿಯ ನಾಯಕ. ಸಾರ್ವಜನಿಕ ಜೀನವದಲ್ಲಿ ನನಗೂ ಸಾಕಷ್ಟು ಅನುಭವವಿದೆ. ಮೋದಿಯವರ ಜೊತೆ ಅಭಿವೃದ್ದಿ ಬಗ್ಗೆ ಅಷ್ಟೇ ಮಾತನಾಡಿದ್ದೆ. ಆದರೆ ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ ಎಂದಿದ್ದಾರೆ.