ಗಂಡನ ವೀರ್ಯಾಣು ಕೌಂಟ್ ಕಡಿಮೆ ಎಂದು ಸೊಸೆಗೆ ಮಾವನೇ ಹೀಗೆ ಮಾಡೋದಾ

Krishnaveni K

ಮಂಗಳವಾರ, 12 ಆಗಸ್ಟ್ 2025 (10:49 IST)
ಗುಜರಾತ್: ಗಂಡನ ವೀರ್ಯಾಣು ಕೌಂಟ್ ಕಡಿಮೆ ಎಂದು ಮಾವನೇ ಸೊಸೆ ಮೇಲೆ ನಿರಂತರ ಅತ್ಯಾಚಾರವೆಸಗಿದ ಹೇಯ ಕೃತ್ಯ ಗುಜರಾತ್ ನಲ್ಲಿ ನಡೆದಿದೆ. ಈಗ ಸೊಸೆ ಪೊಲಿಸರಿಗೆ ದೂರು ನೀಡಿದ್ದಾಳೆ.

40 ವರ್ಷದ ಮಹಿಳೆ ಮಾವ ಮತ್ತು ಅತ್ತಿಗೆಯ ಗಂಡನಿಂದ ನಿರಂತರ ಅತ್ಯಾಚಾರಕ್ಕೊಳಗಾದ ಪರಿಣಾಮ ಗರ್ಭಿಣಿಯಾಗಿದ್ದಳು. ಜುಲೈನಲ್ಲಿ ಆಕೆಗೆ ಗರ್ಭಪಾತವಾಗಿದೆ. ಆ ಬಳಿಕ ಮಹಿಳೆ ಪೊಲೀಸರಿಗೆ ತನ್ನ ಮೇಲಾದ ಹೀನ ಕೃತ್ಯದ ವಿರುದ್ಧ ದೂರು ನೀಡಿದ್ದಾಳೆ.

ಮಹಿಳೆ ಹೇಳಿದಂತೆ 2024 ರಲ್ಲಿ ಮದುವೆ ಬಳಿಕ ಆಕೆ ತನ್ನ ಗಂಡನ ಮನೆಗೆ ಶಿಫ್ಟ್ ಆಗಿದ್ದಳು. ಮದುವೆಯಾದ ಒಂದೇ ವಾರಕ್ಕೆ ಆಕೆಯ ಅತ್ತೆ-ಮಾವ ವಯಸ್ಸಿನ ಕಾರಣಕ್ಕೆ ನಿಮಗೆ ಮಕ್ಕಳಾಗಲು ಕಷ್ಟ. ಹೀಗಾಗಿ ಫರ್ಟಿಲಿಟಿ ಟ್ರೀಟ್ ಮೆಂಟ್ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದರು.

ಅದರಂತೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಂಡನಿಗೆ ವೀರ್ಯಾಣು ಸಂಖ್ಯೆ ಕಡಿಮೆಯಿರುವುದು ತಿಳಿದುಬಂದಿತ್ತು. ಇದರಿಂದ ದಂಪತಿಗೆ ಮಗುವಾಗುವುದು ಕಷ್ಟವಾಗಿತ್ತು. ಹೀಗಾಗಿ ಇಬ್ಬರೂ ಐವಿಎಫ್ ಮೂಲಕ ಮಗು ಪಡೆಯಲು ಪ್ರಯತ್ನಿಸಿದರು. ಆದರೆ ಅದೂ ಸಫಲವಾಗಲಿಲ್ಲ. ಆಗ ಮಹಿಳೆ ರಗಳೆಗಳೇ ಬೇಡ ಅನಾಥ ಮಗುವನ್ನು ದತ್ತು ಪಡೆಯೋಣ ಎಂದು ಹೇಳಿದ್ದಳು.

ಆದರೆ ಇದಕ್ಕೆ ಗಂಡನ ಮನೆಯವರು ಒಪ್ಪಲಿಲ್ಲ. ಒಂದು ದಿನ ರಾತ್ರಿ ಮಹಿಳೆಯ ಕೊಠಡಿಗೆ ಮಾವ ಸದ್ದಿಲ್ಲದೇ ಬಂದು ಅತ್ಯಾಚಾರವೆಸಗಿದ್ದ. ಇದರ ಬಗ್ಗೆ ಗಂಡನ ಬಳಿ ಹೇಳಿದಾಗ ನನಗೆ ಮಗು ಬೇಕು, ಅದಕ್ಕೇ ಹೀಗೆ ಮಾಡುತ್ತಿದ್ದಾರೆ. ಯಾರಿಗಾದರೂ ಈ ವಿಚಾರ ಹೇಳಿದರೆ ನಿನ್ನ ನಗ್ನ ಫೋಟೋಗಳನ್ನು ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದ.

ಮಾವನಿಂದ ಅತ್ಯಾಚಾರಕ್ಕೊಳಗಾಗಿದ್ದರೂ ಮಹಿಳೆ ಗರ್ಭಿಣಿಯಾಗಿರಲಿಲ್ಲ. ಬಳಿಕ ಅತ್ತಿಗೆಯ ಗಂಡನೂ ಇದೇ ರೀತಿ ಅತ್ಯಾಚಾರವೆಸಗಿದ್ದ. ಕೊನೆಗೆ ಮಹಿಳೆ ಗರ್ಭಿಣಿಯಾಗಿದ್ದಳು. ಆದರೆ ಕಳೆದ ತಿಂಗಳು ಗರ್ಭಪಾತವಾಗಿತ್ತು. ಈ ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಗಂಡನ ಮನೆಯವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ